Home Uncategorized ದ್ವೇಷವೆಂದೂ ಜಯಿಸದು, ಪ್ರಯತ್ನ ಬಿಡಬೇಡಿ | ಕಾಮಿಡಿಯನ್ ಮುನವ್ವರ್ ಗೆ ರಾಹುಲ್ ಸಾಥ್ ?

ದ್ವೇಷವೆಂದೂ ಜಯಿಸದು, ಪ್ರಯತ್ನ ಬಿಡಬೇಡಿ | ಕಾಮಿಡಿಯನ್ ಮುನವ್ವರ್ ಗೆ ರಾಹುಲ್ ಸಾಥ್ ?

ನವದೆಹಲಿ: ಬೆಂಗಳೂರಿನಲ್ಲಿ ಖ್ಯಾತ ಕಾಮಿಡಿಯನ್ ಮುನವ್ವರ್ ಫಾರೂಕಿಯ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ ತಾನು ರಂಗಕ್ಕೆ ವಿದಾಯ ಹೇಳುತ್ತಿರುವುದಾಗಿ ಫಾರೂಕಿ ಘೋಷಿಸಿದ್ದರು. ಅಲ್ಲದೇ ಫಾರೂಕೀ ಕಾಮಿಡಿ ರಂಗವನ್ನು ತೊರೆಯುವುದಾಗಿ ಟ್ವೀಟ್ ಮಾಡಿದ್ದರು. ಇದೀಗ ರಾಹುಲ್ ಗಾಂಧಿ ಮುನವ್ವರ್ ಫಾರೂಕಿಯ ಹೆಸರನ್ನು ಉಲ್ಲೇಖಿಸದೇ ಮಾಡಿದ ಟ್ವೀಟ್ ಸದ್ಯ ಭಾರೀ ವೈರಲ್ ಆಗಿದೆ.


ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಂಬಿಕೆ ಇಡಿ. ದ್ವೇಷವು ಎಂದೂ ಜಯಿಸುವುದಿಲ್ಲ. ಪ್ರಯತ್ನ ಬಿಡಬೇಡಿ, ನಿಲ್ಲಬೇಡಿ ಎಂದು ‘ಒಗ್ಗಟ್ಟಿನಿಂದ ನಿಲ್ಲೋಣ’ ಎನ್ನುವ ಹ್ಯಾಷ್ ಟ್ಯಾಗ್ ಬಳಸಿ ಮುನವ್ವರ್ ಹೆಸರೆತ್ತದೇ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ.
ದ್ವೇಷವು ಜಯಿಸಿತು, ಕಲಾವಿದ ಸೋತುಹೋಗಿದ್ದಾನೆ ಎಂದು ಫಾರೂಕಿಯ ಟ್ವೀಟ್ ಗೆ ರಾಹುಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ಟ್ವಿಟರಿಗರು ಬಣ್ಣಿಸಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಮುನವ್ವರ್ ಫಾರೂಕಿಯ 12 ಪ್ರದರ್ಶನಗಳು ಬಲಪಂಥೀಯವಾದಿಗಳ ಬೆದರಿಕೆ ಮತ್ತು ಪೊಲೀಸರ ಅನುಮತಿ ನಿರಾಕರಣೆಯ ಕಾರಣದಿಂದ ರದ್ದುಗೊಂಡಿತ್ತು. ಅಲ್ಲದೇ ಇತ್ತೀಚೆಗಷ್ಟೆ ಫಾರೂಕಿ ವಿರುದ್ಧ ಹಿಂದುತ್ವ ಸಂಘಟನೆಗಳು ನಕಲಿ ಆರೋಪ ಹೊರಿಸಿತ್ತಲ್ಲದೇ ಅವರನ್ನು ಬಂಧಿಸಲಾಗಿತ್ತು. ಒಂದು ತಿಂಗಳ ಕಾಲ ಜೈಲನುಭವಿಸಿ ಜಾಮೀನಿನ ಮೇಲೆ ಫಾರೂಕಿ ಬಿಡುಗಡೆಯಾಗಿದ್ದರು.

Join Whatsapp
Exit mobile version