Home ಟಾಪ್ ಸುದ್ದಿಗಳು ಶರಣಾಗತಿಗೆ ಸಮಯಾವಕಾಶ ಕೋರಿದ ನವಜೋತ್ ಸಿಂಗ್ ಸಿಧು

ಶರಣಾಗತಿಗೆ ಸಮಯಾವಕಾಶ ಕೋರಿದ ನವಜೋತ್ ಸಿಂಗ್ ಸಿಧು

ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು 34 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಘಟನೆಯಲ್ಲಿ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಒಂದು ದಿನದ ನಂತರ, ಅನಾರೋಗ್ಯದ ಕಾರಣ ನೀಡಿ ಶರಣಾಗಲು ಇನ್ನೂ ಕೆಲವು ವಾರಗಳ ಸಮಯಾವಕಾಶವನ್ನು ಕೋರಿದ್ದಾರೆ.

ಶಿಕ್ಷೆಯ ಆದೇಶದ ನಂತರ ಸಿಧು ಅವರು ನಿನ್ನೆ ಟ್ವೀಟ್ ಮಾಡಿದ್ದು, “ಕಾನೂನಿನ ಘನತೆಗೆ ಶರಣಾಗುತ್ತೇನೆ” ಎಂದು ಹೇಳಿದ್ದು ಇಂದು ಬೆಳಿಗ್ಗೆ, ಅವರು ಪಂಜಾಬಿನ ಪಾಟಿಯಾಲದ ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎಂದು ವರದಿಗಳು ಸೂಚಿಸಿದ್ದವು. ಆದರೆ ಶರಣಾಗತಿಗೆ ಕೆಲವು ವಾರಗಳ ಸಮಯಾವಕಾಶವನ್ನು ಇಂದು ಸಿಧು ವಿನಂತಿಸಿದ್ದಾರೆ.

ಸಮಯಕ್ಕಾಗಿ ಸಿಧು ಅವರ ಮನವಿಯನ್ನು ವಿರೋಧಿಸಿದ ಪಂಜಾಬ್ ಪರ ವಕೀಲರು, “34 ವರ್ಷಗಳು ಎಂದರೆ ಅಪರಾಧವು ಸಾಯುತ್ತದೆ ಎಂದು ಅರ್ಥವಲ್ಲ. ಈಗ ತೀರ್ಪು ಪ್ರಕಟವಾಗಿದೆ, ಅವರು ಮತ್ತೆ ಮೂರರಿಂದ ನಾಲ್ಕು ವಾರಗಳನ್ನು ಬಯಸುತ್ತಾರೆ” ಇದನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ನಂತರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕ್ರಿಕೆಟಿಗ-ರಾಜಕಾರಣಿಗೆ ಸುಪ್ರೀಂ ಕೋರ್ಟ್ ಗುರುವಾರ ಒಂದು ವರ್ಷ  ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Join Whatsapp
Exit mobile version