Home ಟಾಪ್ ಸುದ್ದಿಗಳು ಪೆಗಾಗಸ್ ಕದ್ದಾಲಿಕೆ: ವರದಿ ಸಲ್ಲಿಸಲು ತಾಂತ್ರಿಕ ಸಮಿತಿಗೆ ಮತ್ತೆ ನಾಲ್ಕು ವಾರಗಳ ಕಾಲಾವಕಾಶ ನೀಡಿದ ಸುಪ್ರೀಂ...

ಪೆಗಾಗಸ್ ಕದ್ದಾಲಿಕೆ: ವರದಿ ಸಲ್ಲಿಸಲು ತಾಂತ್ರಿಕ ಸಮಿತಿಗೆ ಮತ್ತೆ ನಾಲ್ಕು ವಾರಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪೆಗಾಸಸ್ ಕುತಂತ್ರಾಂಶವನ್ನು ಅಕ್ರಮವಾಗಿ ಕದ್ದಾಲಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ, ವರದಿ ಸಲ್ಲಿಸಲು ತಾಂತ್ರಿಕ ಸಮಿತಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.


ಪೆಗಾಸಸ್ ಬಳಸಿ ರಾಜಕಾರಣಿಗಳು, ಪತ್ರಕರ್ತರು, ಹೋರಾಟಗಾರರು ಮುಂತಾದವರ ಮೊಬೈಲ್ ಕರೆಗಳನ್ನು ಕದ್ದಾಲಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಲಯ ನೇಮಿಸಿದ ತಾಂತ್ರಿಕ ಸಮಿತಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ವರದಿಯನ್ನು ಮೇಲ್ವಿಚಾರಣಾ ನ್ಯಾಯಾಧೀಶರಾದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಆರ್.ವಿ.ರವೀಂದ್ರ ಅವರಿಗೆ ಸಲ್ಲಿಸಲು ಹೆಚ್ಚಿನ ಸಮಯವನ್ನು ನೀಡಿತು.
ಜೂನ್ ತಿಂಗಳಾಂತ್ಯಕ್ಕೆ ವರದಿ ಸಲ್ಲಿಸುವಂತೆ ಪೀಠ ಆದೇಶಿಸಿತು.


ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವು, ಪೆಗಾಸಸ್ ಕುತಂತ್ರಾಶ ಅಳವಡಿಸಲಾಗಿದೆ ಎನ್ನಲಾಗಿರುವ 29 ಮೊಬೈಲ್ ಫೋನ್ ಗಳನ್ನು ಪರೀಕ್ಷಿಸಿದ ಸಮಿತಿಯಿಂದ ಮಧ್ಯಂತರ ವರದಿಯನ್ನು ಸ್ವೀಕರಿಸಿತು.
ಆದಾಗ್ಯೂ, ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಲು ಮೇ 2022 ರ ಅಂತ್ಯದವರೆಗೆ ಸಮಯವನ್ನು ಕೋರಿತು. ಪೀಠವು ಸಮಿತಿಯ ಮನವಿಯನ್ನು ಪುರಸ್ಕರಿಸಿ ಸಮಯಾವಕಾಶ ನೀಡಿತು.

Join Whatsapp
Exit mobile version