ಮಂಜೇಶ್ವರ: ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಾಸಿರ್ ಸುಳ್ಯಮೆ

Prasthutha|

ಮಂಜೇಶ್ವರ: ದಾರಿಯಲ್ಲಿ ಸಿಕ್ಕಿದ ಚಿನ್ನಾಭರಣವಿದ್ದ ಬ್ಯಾಗ್‌ ಒಂದನ್ನು ಯುವಕರೊಬ್ಬರು ವಾರಸುದಾರರಿಗೆ ವಾಪಸ್ ಮರಳಿಸಿ ಪ್ರಾಮಾಣಿಕತೆ ಮರೆದಂತಹ ಘಟನೆ ಮಂಜೇಶ್ವರದ ದೈಗೋಳಿಯಲ್ಲಿ ನಡೆದಿದೆ.

- Advertisement -

ಮಂಜೇಶ್ವರ ಮೂಲದ ಯಾಕೂಬ್ ನಈಮಿ ಮತ್ತು ಅವರ ಕುಟುಂಬ ಕನ್ಯಾನ ಮಾರ್ಗದಿಂದ ದ್ವಿಚಕ್ರ ವಾಹನದ ಮೂಲಕ ಸಂಚರಿಸುತ್ತಿದ್ದಾಗ ಕೊಡ್ಲಮೊಗರು ಎಂಬ ಪ್ರದೇಶದಲ್ಲಿ ಚಿನ್ನಾಭರಣ ಸೇರಿದಂತೆ ಕೆಲವು ವಸ್ತುಗಳು ಇರುವ ಬ್ಯಾಗನ್ನು ಕಳೆದುಕೊಂಡಿದ್ದರು.

ಬ್ಯಾಗ್ ನಲ್ಲಿ 12 ಪವನ್ ಚಿನ್ನಾಭರಣ, ಮೊಬೈಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಇತ್ತು ಎಂದು ತಿಳಿದುಬಂದಿದೆ.

- Advertisement -

ಸುಳ್ಯಮೆ ನಿವಾಸಿ ನಾಸಿರ್ ಎಂಬ ಯುವಕರೊಬ್ಬರು ಆ ದಾರಿಯಾಗಿ ಹೋಗುತ್ತಿದ್ದಾಗ ಅವರಿಗೆ ಈ ಬ್ಯಾಗ್ ಸಿಕ್ಕಿದ್ದು, ತಕ್ಷಣ ಅವರು ಅದನ್ನು ವಾರುಸುದಾರರಿಗೆ ಮರಳಿಸಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರಾಮಾಣಿಕತೆ ಮೆರೆದ ನಾಸಿರ್ ಸುಳ್ಯಮೆ, ದೈಗೋಳಿಯಲ್ಲಿ ಅಲ್- ಫಲಾಹ್ ಎಂಬ ಹೆಸರಿನ ಚಿಕನ್ ಸ್ಟಾಲ್ ನಡೆಸುತ್ತಿದ್ದಾರೆ.

Join Whatsapp
Exit mobile version