ಬೆಂಗರೆ ಅಭಿವೃದ್ಧಿಯ ಸಾಧಕ ಮುನೀಬ್ ಬೆಂಗರೆಯಿಂದ ವಿವಿಧ ಕಾಮಗಾರಿಯ ಉದ್ಘಾಟನೆ

Prasthutha|

ಬೆಂಗರೆ: ಮಂಗಳೂರು ಮಹಾನಗರ ಪಾಲಿಕೆಯ 60ನೇ ಬೆಂಗರೆ ವಾರ್ಡ್ ಕಾರ್ಪೊರೇಟರ್ ಮುನೀಬ್ ಬೆಂಗರೆ ಯ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಪೂರ್ಣಗೊಂಡ ವಿವಿಧ ಕಾಮಗಾರಿಯನ್ನು ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಉಪಯೋಗಿಸಲು ಹಸ್ತಾಂತರಿಸಲಾಯಿತು.

- Advertisement -


ಕಸಬ ಬೆಂಗರೆ ಫೇರಿ ಪಾಯಿಂಟ್ ಗೆ ಹೋಗುವ ಒಳ ರಸ್ತೆಯ ಎರಡು ಲಕ್ಷ ಇಪ್ತತ್ತ ಮೂರು ಸಾವಿರ ರೂಪಾಯಿ ಮೊತ್ತದ ಕಾಂಕ್ರೀಟೀಕರಣದ ಮೂಲಕ ಅಭಿವೃದ್ಧಿ ಪಡಿಸಿದ ಕಾಮಗಾರಿಯನ್ನು ಮೊಯ್ಯುದ್ದೀನ್ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಶರೀಫ್ ದಾರಿಮಿ ದುವಾ ನೆರವೇರಿಸಿ ಅಲ್ ಮದ್ರಸತುಲ್ ದೀನಿಯ್ಯ ಎಸೋಷಿಯೇಷನ್ ಇದರ ಅಧ್ಯಕ್ಷ ರಾದ ಜನಾಬ್ ಬಿಲಾಲ್ ಮೊಯ್ದೀನ್ ಮತ್ತು ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ ರವರು ಉದ್ಘಾಟನೆಯನ್ನು ಮಾಡಿದರು.


ಅನಸ್ ಬಿನ್ ಮಾಲಿಕ್‌ ಮಸೀದಿಯ ಮುಂಭಾಗದಲ್ಲಿ ಮಳೆನೀರು ನಿಂತು ಸಾರ್ವಜನಿಕರಿಗೆ ತೊಂದರೆ ಯಾಗುವುದನ್ನು ಮನಗಂಡು ಕಾರ್ಪೊರೇಟರ್ ಮುನೀಬ್ ಬೆಂಗರೆ ಶಾಶ್ವತ ಪರಿಹಾರವನ್ನು ಒದಗಿಸುವ ಮೂಲಕ ಎರಡು ಲಕ್ಷ ಎಂಬತ್ತ ಮೂರು ಸಾವಿರ ರೂಪಾಯಿಯ ಚರಂಡಿ ರಚನೆ ಮಾಡಿ ಮತ್ತು ಚೇಂಬರ್ ರಚಿಸಿ ಹ್ಯೂಮ್ ಪೈಪ್ ಅಳವಡಿಕೆ ಕಾಮಗಾರಿಯ ಮೊತ್ತ ಒಂದು‌ ಲಕ್ಷ ಐವತ್ತು ಸಾವಿರ ರೂಪಾಯಿ ಹಾಗೂ ತೋಟ ಬೆಂಗರೆ ದುರ್ಗಾ ಪರಮೇಶ್ವರಿ ಮಹಾದ್ವಾರ ದ ಮುಂಭಾಗದಲ್ಲಿ ಎರಡು ಲಕ್ಷ ಇಪ್ಪತ್ತು ಸಾವಿರ ರೂಪಾಯಿಯ ಆರ್,ಸಿ,ಸಿ ಚರಂಡಿ ನಿರ್ಮಾಣ ಮತ್ತು ಅನಸ್ ಬಿನ್ ಮಾಲಿಕ್ ಮಸೀದಿಯ ಎಡಭಾಗದಲ್ಲಿ ಎಪ್ಪತ್ತ ಮೂರು ಸಾವಿರ ರೂಪಾಯಿಯ ಹೊಸತಾಗಿ ಮೂರು ಕಂಬಗಳನ್ನು ಅಳವಡಿಸಿ ವಿದ್ಯುತ್ ತಂತಿಯನ್ನು ಜೋಡಿಸಿ ಎಲ್,ಇಡಿ,ಲೈಟ್ ಅಳವಡಿಸಲಾಯತು.

- Advertisement -


ಈ ಸಂಧರ್ಭದಲ್ಲಿ ಅನಸ್ ಬಿನ್ ಮಾಲಿಕ್ ಅಧ್ಯಕ್ಷರಾದ ಜನಾಬ್ ಸಮದ್,ಜಮಾಅತ್ ಸಮಿತಿಯ ಪ್ರಮುಖರಾದ ಈಚು ಹಾಜಿ,ಇಸ್ಮಾಯಿಲ್,ಹಿರಿಯರಾದ ಹಂಝ ಹಾಜಿ‌, ಬಶೀರ್, ದೇವಸ್ಥಾನದ ಪ್ರಮುಖ ರಾದ ದಯಾನಂದ ಕಾರ್ವಿ ,ಚಂದ್ರಹಾಸ ಸುವರ್ಣ, ಎಸ್,ಡಿ,ಪಿ,ಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಸಿದ್ದೀಕ್ ,ಬೆಂಗರೆ ವಾರ್ಡ್ ಕಾರ್ಯದರ್ಶಿ ಶಾದಾಬ್ , ಕೋಶಾಧಿಕಾರಿ ಲತೀಫ್ ,ಬೂತ್ ಅಧ್ಯಕ್ಷರಾದ ಕಬೀರ್ ಎಂ,ಕೆ,ಎಚ್,ಮುಝೈನ್, ರಶೀದ್ ,ಇಂತಿಯಾಝ್,ಶಬೀರ್,ಸ್ಥಳೀಯ ಮುಖಂಡರಾದ ನಿಝಾರ್,ಅಸ್ಪಿರ್,ಮುಸ್ತಫ, ಮಝಾರ್,ಅಝ್ಗರ್, ಮುಖಂಡರಾದ ಅಮ್ಮಿಯಾಕ,ಹಮೀದಾಕ,ನಾಸಿರ್ ಮುಂತಾದವರು ಉಪಸ್ಥಿತಿ ಇದ್ದರು.

Join Whatsapp
Exit mobile version