ಬೆಂಗಳೂರು: ಆತ್ಮ ಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ವತಿಯಿಂದ ಆತ್ಮ ಹತ್ಯೆ ತಡೆ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ಕ್ಯಾಂಡಲ್ ಉರಿಸುವ ಮೂಲಕ ಜಾಗೃತಿ ಅಭಿಯಾನ ನಡೆಸಲಾಯಿತು.
ರೈತರು ಮತ್ತು ಕಾರ್ಮಿಕರು ಸಾಲ ತೀರಿಸಲು ಸಾಧ್ಯವಾಗದೆ ಮತ್ತು ಮೇಲಾಧಿಕಾರಿಗಳ ಒತ್ತಡ ರಾಜಕಾರಣಿಗಳ ದಬ್ಬಾಳಿಕೆ ಪ್ರೇಮ ವೈಫಲ್ಯ ಮಾದಕವಸ್ತು ಸೇವನೆ,ವರದಕ್ಷಿಣೆ ಇಂತಹ ಹಲವಾರು ಪ್ರಕರಣಗಳು ನಾವು ಪತ್ರಿಕೆ ಮಾಧ್ಯಮಗಳಲ್ಲಿ ಹಲವಾರು ಘಟನೆಗಳು ಕಂಡುಬರುತ್ತಿದೆ. ಪ್ರತೀ ಮನುಷ್ಯನ ಹುಟ್ಟು ಆಕಸ್ಮಿಕ ಹಾಗೂ ಸಾವು ನಿಶ್ಚಿತ ಯಾವ ಮನುಷ್ಯ ಕೂಡಾ ತನ್ನ ಆಯ್ಕೆಯಂತೆ ಜನಿಸಲು ಸಾದ್ಯವಿಲ್ಲ ಸಾವು ನಿಶ್ಚಿತವಾದರೂ ಅದನ್ನು ನಾವೇ ಆಹ್ವಾನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಆತ್ಮ ಹತ್ಯೆ ಮಾಡುವುದನ್ನು ಯಾವ ಧರ್ಮವೂ ಒಪ್ಪುವುದಿಲ್ಲ ಆತ್ಮ ಹತ್ಯೆಯಿಂದ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲ. ಎಲ್ಲರಿಗೂ ಘನತೆಯಿಂದ ಜೀವಿಸುವ ಹಕ್ಕಿದೆ.ಆತ್ಮ ಹತ್ಯಾ ಪ್ರಕರಣಗಳನ್ನು ತಡೆಗಟ್ಟಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು SDTU ರಾಜ್ಯ ಪ್ರಧಾನ ಕಾರ್ಯದರ್ಶಿN M ಇಕ್ಬಾಲ್ ತಿಳಿಸಿದ್ದಾರೆ.