ಮೈಸೂರು: ಮೈಸೂರಿನ ರಾಜವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಬೆಳಗ್ಗೆ ತಾಯಿ ಪ್ರಮೋದಾದೇವಿಯೊಂದಿಗೆ ತೆರಳಿ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಾಡಿದರು. ಈ ವೇಳೆ ಅವರು ಘೋಷಣೆ ಮಾಡಿದ ಚರಾಸ್ತಿ ಮೌಲ್ಯ ಒಟ್ಟಾರೆ 4.99 ಕೊಟಿ ರೂ. ಆಗಿದೆ. ವಿಶೇಷವೆಂದರೆ ತಮ್ಮ ಬಳಿ ಸ್ವಂತ ಕಾರಿಲ್ಲ ಎಂದು ಅವರು ಘೋಷಣೆ ಮಾಡಿಕೊಂಡಿದ್ದಾರೆ.
ತಮ್ಮ ಕೈಯಲ್ಲಿ 1 ಲಕ್ಷ ರೂ. ನಗದು, ಎರಡು ಬ್ಯಾಂಕ್ ಖಾತೆಗಳಲ್ಲಿ 23.55 ಲಕ್ಷ ರೂ. ಹಣವಿದೆ. 1 ಕೋಟಿ ಮೌಲ್ಯದ ವಿವಿಧ ಕಂಪನಿಗಳಲ್ಲಿ ಬಾಂಡ್ ಮತ್ತು ಶೇರ್ಸ್‌ಗಳಿವೆ. ಜೊತೆಗೆ, ತಮ್ಮ ಬಳಿ 4 ಕೆ.ಜಿ. ಚಿನ್ನ ಹಾಗೂ 20 ಕೆ.ಜಿ. ಬೆಳ್ಳಿ ಇದೆ. ತಾವು ಯಾವುದೇ ಕೃಷಿ ಭೂಮಿ ಹಾಗೂ ಸ್ವಂತ ಮನೆ ಹೊಂದಿಲ್ಲ. ಯಾವ ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಪಡೆದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.