Home ಟಾಪ್ ಸುದ್ದಿಗಳು ಬೆಂಗಳೂರು: ಕೋರ್ಟ್‌’ಗೆ ಹಾಜರಾದ ನಟಿ ರಮ್ಯಾ

ಬೆಂಗಳೂರು: ಕೋರ್ಟ್‌’ಗೆ ಹಾಜರಾದ ನಟಿ ರಮ್ಯಾ

ಬೆಂಗಳೂರು: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ವಿವಾದಕ್ಕೆ ಸಂಬಂಧಿಸಿದ ಕೇಸ್ ವಿಚಾರಣೆಗೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ ಗೆ ಇಂದು (ಜ.7) ನಟಿ ರಮ್ಯಾ ಹಾಜರಾಗಿದ್ದಾರೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣದ ವಿಚಾರಣೆಗೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ ಗೆ ರಮ್ಯಾ ಹಾಜರಾಗಿದ್ದಾರೆ.

ಇನ್ನೂ 2024ರಲ್ಲಿ ರಿಲೀಸ್ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

Join Whatsapp
Exit mobile version