Home ಟಾಪ್ ಸುದ್ದಿಗಳು ಮ್ಯಾನ್ಮಾರ್: ಆಂಗ್ ಸಾನ್ ಸೂಕಿ ವಿರುದ್ಧ ಚುನಾವಣಾ ಅಕ್ರಮ ಆರೋಪ

ಮ್ಯಾನ್ಮಾರ್: ಆಂಗ್ ಸಾನ್ ಸೂಕಿ ವಿರುದ್ಧ ಚುನಾವಣಾ ಅಕ್ರಮ ಆರೋಪ

ಬೀಜಿಂಗ್: ಮ್ಯಾನ್ಮಾರ್ ಮಾಜಿ ಅಧ್ಯಕ್ಷೆ ಆಂಗ್ ಸಾನ್ ಸೂಕು ಸೇರಿದಂತೆ ಒಟ್ಟು 16 ಮಂದಿಯ ವಿರುದ್ಧ ಚುನಾವಣಾ ಆಯೋಗ ವಂಚನೆ ಆರೋಪ ಹೊರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2020 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈ ಆರೋಪ ಹೊರಿಸಿದೆ ಎಂದು ಹೇಳಲಾಗಿದೆ.
ಆಂಗ್ ಸಾನ್ ಸೂಕಿ, ವಿನ್ ಮೈಂಟ್ ಮತ್ತು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥರು ವಂಚನೆ ಪ್ರಕರಣ ಮತ್ತು ಕಾನೂನುಬಾಹಿರ ಕ್ರಮಗಳ ಆರೋಪದ ಪ್ರಮುಖರು ಎಂದು ಉಲ್ಲೇಖಿಸಲಾಗಿದೆ. ಆಂಗ್ ಸಾನ್ ಸೂಕಿ ಅವರು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದಿಂದ ಕಣಕ್ಕಿಳಿದು ಪ್ರಚಂಡ ಬಹುಮತದಿಂದ ಜಯಗಳಿಸಿದ್ದರು.

ಕಳೆದ ಫೆಬ್ರವರಿ 1 ರಂದು ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಲಾಗಿತ್ತು.

Join Whatsapp
Exit mobile version