Home ಟಾಪ್ ಸುದ್ದಿಗಳು ವಿವಾಹಿತ ಮಗಳ ಮೇಲೆ ಅತ್ಯಾಚಾರಗೈದು ಹತ್ಯೆ ಮಾಡಿದ ತಂದೆ!

ವಿವಾಹಿತ ಮಗಳ ಮೇಲೆ ಅತ್ಯಾಚಾರಗೈದು ಹತ್ಯೆ ಮಾಡಿದ ತಂದೆ!

ಭೋಪಾಲ್: ವ್ಯಕ್ತಿಯೋರ್ವ ತನ್ನ ವಿವಾಹಿತ ಮಗಳ ಮೇಲೆ ಅತ್ಯಾಚಾರಗೈದು, ಆಕೆಯನ್ನು ಹತ್ಯೆ ಮಾಡಿರುವ ಘಟನೆ ಭೋಪಾಲ್ ರಾತಿಬಾದ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಮಲ್ ಕೊಲೆ ಮಾಡಿರುವ ಆರೋಪಿ ಎಂದು ಗುರುತಿಸಲಾಗಿದೆ.

ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಭಾನುವಾರ ಮಧ್ಯಾಹ್ನ 25 ವರ್ಷದ ಯುವತಿ ಮತ್ತು 8 ತಿಂಗಳ ಮಗುವಿನ ಶವ ಕಾಡಿನಲ್ಲಿ ಪತ್ತೆಯಾಗಿವೆ. ಇನ್ನು ಮೃತ ಯುವತಿಯನ್ನು ಬಿಲ್ಕಿಸ್ ಗಂಜ್ ನಿವಾಸಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ತಂದೆ ಕಮಲ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.  

ಒಂದು ವರ್ಷದ ಹಿಂದೆ, ಮಗಳು ಬೇರೆ ಜಾತಿಯ ಹುಡುಗನೊಂದಿಗೆ ರಾಯ್ ಪುರಗೆ ಓಡಿಹೋಗಿದ್ದಳು ಮತ್ತು ಅವನೊಂದಿಗೆ ಪ್ರೇಮ ವಿವಾಹವಾಗಿದ್ದಳು. ಇದರಿಂದ ತಂದೆ ಕೋಪಗೊಂಡಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಮಗು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ತಂದೆ ಮತ್ತು ಮಗನನ್ನು ಬಂಧಿಸಲಾಗಿದೆ.

Join Whatsapp
Exit mobile version