Home Uncategorized ಮುರುಘಾಶ್ರೀ ಕೈಬಿಟ್ಟು SJM ವಿದ್ಯಾಪೀಠಕ್ಕೆ ನೂತನ ಸಮಿತಿ ರಚನೆ

ಮುರುಘಾಶ್ರೀ ಕೈಬಿಟ್ಟು SJM ವಿದ್ಯಾಪೀಠಕ್ಕೆ ನೂತನ ಸಮಿತಿ ರಚನೆ

ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಕಾಮತೃಷೆಗೆ ಬಳಸುತ್ತಿದ್ದ ಗಂಭೀರ ಆರೋಪದಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಜೈಲು ಪಾಲಾಗಿ ಜಾಮೀನು ಬಿಡುಗಡೆಗೊಂಡ ಮುರುಘಾಶ್ರೀ ಅಧ್ಯಕ್ಷರಾಗಿದ್ದ ಎಸ್ ಜೆ ಎಂ ವಿದ್ಯಾಪೀಠಕ್ಕೆ ನೂತನ ಸಮಿತಿ ರಚನೆಯಾಗಿದೆ. ನೂತನ ಸಮಿತಿ ನವೆಂಬರ್.2 ರಂದು ರಿವೀಲ್ ಮಾಡಿರುವಂತ ಪತ್ರ ವೈರಲ್ ಆಗಿದೆ. ಅದರಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಮುರುಘಾಶ್ರೀಯನ್ನು ಕೈ ಬಿಡಲಾಗಿದೆ.

ಚಿತ್ರದುರ್ಗದ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹಾಗೂ ಮುರುಘಾ ಮಠದ ಆಡಳಿತಾಧಿಕಾರಿಯಾಗಿರುವ ನ್ಯಾಯಾಧೀಶೆ ರೇಖಾ ಅವರ ನೇತೃತ್ವದಲ್ಲಿ ಎಸ್ ಜೆ ಎಂ ವಿದ್ಯಾಪೀಠಕ್ಕೆ ನೂತನ ಸಮಿತಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿದ್ದ ಮುರುಘಾ ಶ್ರೀಗಳನ್ನು ನೂತನ ಸಮಿತಿಯಲ್ಲಿ ಕೈಬಿಡಲಾಗಿದೆ.
ಅಂದಹಾಗೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಮುರುಘಾ ಮಠದ ಆಡಳಿತಾಧಿಕಾರಿಯಾಗಿ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಇದೀಗ ಎಸ್ ಜೆ ಎಂ ವಿದ್ಯಾಪೀಠದ ನೂತನ ಸಮಿತಿ ರಚನೆಯ ಬೆನ್ನಲ್ಲೇ, ಮುರುಘಾ ಶ್ರೀ ತಮ್ಮನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Whatsapp
Exit mobile version