Home ಟಾಪ್ ಸುದ್ದಿಗಳು ಅಮೆರಿಕದಲ್ಲಿರುವ 3ನೇ ಅತಿ ದೊಡ್ಡ ಅಕ್ರಮ ವಲಸಿಗರು ಭಾರತೀಯರು

ಅಮೆರಿಕದಲ್ಲಿರುವ 3ನೇ ಅತಿ ದೊಡ್ಡ ಅಕ್ರಮ ವಲಸಿಗರು ಭಾರತೀಯರು

ವಾಷಿಂಗ್ಟನ್: ಅಮೆರಿಕದಲ್ಲಿರುವ 3ನೇ ಅತಿ ದೊಡ್ಡ ಅಕ್ರಮ ವಲಸಿಗರು ಭಾರತೀಯರು ಎಂದು ಪ್ಯೂ ರಿಸರ್ಚ್ ಅಂದಾಜು ಮಾಡಿದೆ. ಈ ರಿಸರ್ಚ್ ಪ್ರಕಾರ ಅಮೆರಿಕದಲ್ಲಿ ಸುಮಾರು 725,000 ಅಕ್ರಮ ಭಾರತೀಯ ವಲಸೆಗಾರರಿದ್ದು, ಮೆಕ್ಸಿಕೋ ಮತ್ತು ಎಲ್ ಸಾಲ್ವಡಾರ್ ನಂತರ ಮೂರನೇ ಅತಿ ದೊಡ್ಡ ಅಕ್ರಮ ವಲಸಿಗರಾಗಿದ್ದಾರೆ.

2021 ರ ಹೊತ್ತಿಗೆ, ದೇಶದ 10.5 ಮಿಲಿಯನ್ ಅನಧಿಕೃತ ವಲಸಿಗರಿದ್ದಾರೆ. ಇದು ಅಮೆರಿಕದ ಒಟ್ಟು ಜನಸಂಖ್ಯೆಯ ಸುಮಾರು ಶೇ. 3ರಷ್ಟು ಮತ್ತು ವಿದೇಶದಲ್ಲಿ ಜನಿಸಿದ ಜನಸಂಖ್ಯೆಯ ಶೇ. 22 ರಷ್ಟು ಪ್ರತಿನಿಧಿಸುತ್ತಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಥಿಂಕ್ ಟ್ಯಾಂಕ್ ಹೇಳಿದೆ.

2007 ರಿಂದ 2021 ರವರೆಗೆ ಅಮೆರಿಕಕ್ಕೆ ಅನಧಿಕೃತವಾಗಿ ಜನರನ್ನು ಕಳಿಸಿರೋದರಲ್ಲಿ ಸಂಖ್ಯೆಯಲ್ಲಿ ಪ್ರಪಂಚದ ಪ್ರತಿಯೊಂದು ಪ್ರದೇಶ ಗಮನಾರ್ಹ ಹೆಚ್ಚಳ ಹೊಂದಿದ್ದು, ಮಧ್ಯ ಅಮೇರಿಕಾ 240,000 ಮತ್ತು ದಕ್ಷಿಣ ಮತ್ತು ಪೂರ್ವ ಏಷ್ಯಾದಿಂದ 180,000 ಅಕ್ರಮ ವಲಸಿಗರಿದ್ದಾರೆ. 2021ರಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಮೆಕ್ಸಿಕೋದ ಅನಧಿಕೃತ ವಲಸಿಗರ ಸಂಖ್ಯೆ 4.1 ಮಿಲಿಯನ್ ಆಗಿದೆ. ಎಲ್ ಸಾಲ್ವಡಾರ್ ನ 800,000 ವಲಸಿಗರು ಮತ್ತು ಭಾರತ 725,000 ಅಕ್ರಮ ವಲಸಿಗರೊಂದಿಗೆ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ ಎಂದು ವರದಿ ಹೇಳಿದೆ.

Join Whatsapp
Exit mobile version