Home Uncategorized ವಿಶ್ವದ ಅತ್ಯಂತ ದಪ್ಪ ಬೆಕ್ಕು ಕ್ರೋಶಿಕ್ ಇನ್ನಿಲ್ಲ..!

ವಿಶ್ವದ ಅತ್ಯಂತ ದಪ್ಪ ಬೆಕ್ಕು ಕ್ರೋಶಿಕ್ ಇನ್ನಿಲ್ಲ..!

ವಿಶ್ವದ ಅತ್ಯಂತ ದಪ್ಪ ಬೆಕ್ಕು ಎಂಬ ದಾಖಲೆ ಬರೆದಿದ್ದ “ಕ್ರಂಬ್ಸ್” ದುರಂತ ಸಾವಿಗೀಡಾಗಿದೆ. ತೂಕ ಕಳೆದುಕೊಳ್ಳಲು ಡಯೆಟ್ ಮೊರೆ ಹೋದ ಒಂದೇ ವಾರದಲ್ಲಿ ಬೆಕ್ಕು ಕೊನೆಯುಸಿರೆಳೆದಿದೆ.


17 ಕೆಜಿ ಭಾರ ಇದ್ದ ಕ್ರೋಶಿಕ್
ಈ ಬೆಕ್ಕು ರಷ್ಯಾದ ಪೆರ್ಮ್ ನಲ್ಲಿರುವ ಆಸ್ಪತ್ರೆಯ ನೆಲ ಮಾಳಿಗೆಯಲ್ಲಿ ವಾಸಿಸುತ್ತಿತ್ತು. ತೂಕ ಹೆಚ್ಚಿದ್ದ ಕಾರಣ ಅದಕ್ಕೆ ನಡೆದಾಡಲು ಸಹ ಸಾಧ್ಯವಾಗ್ತಿರಲಿಲ್ಲ.


ಬಿಸ್ಕತ್ತುಗಳು ಮತ್ತು ಸೂಪ್ ಸೇರಿ ಎಲ್ಲವನ್ನೂ ತಿನ್ನುತ್ತಿದ್ದ ಈ ಬೆಕ್ಕು 38 ಪೌಂಡ್ ಗಳಷ್ಟು (ಸುಮಾರು 17 ಕೆಜಿ) ಹೊಂದಿತ್ತು. ಅಲ್ಲಿಂದ ಅದನ್ನು ಕರೆದುಕೊಂಡು ಬಂದು ತೂಕ ಕಳೆದುಕೊಳ್ಳುವ ಕ್ಯಾಂಪ್ ಗೆ ಸೇರಿಸಲಾಗಿತ್ತು.


ಆಹಾರವನ್ನು ಸೊಂಪಾಗಿ ತಿಂದು ದಷ್ಟಪುಷ್ಟವಾಗಿ ಬೆಳೆದಿದ್ದ ಈ ಬೆಕ್ಕನ್ನು ನೆಲಮಾಳಿಗೆ ಇಂದ ರಕ್ಷಿಸಿ ತೂಕ ಇಳಿಸುವ ಕ್ಯಾಂಪ್ ಗೆ ಸೇರಿಸಲಾಗಿತ್ತು. ಪಾಪ.. ಆ ಮುದ್ದು ಬೆಕ್ಕು ರಷ್ಯಾದ ಪೆರ್ಮ್ ನಲ್ಲಿರುವ ವಿಶೇಷ ಪಶುವೈದ್ಯಕೀಯ ಕೇಂದ್ರದಲ್ಲಿದ್ದುಕೊಂಡು, 7 ಪೌಂಡ್ ತೂಕ ಕೂಡ ಕಳೆದುಕೊಂಡಿತ್ತು.


ಆದರೆ ಬೆಕ್ಕಿಗೆ ಹಠಾತ್ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕ್ಯಾಂಪ್ ಗೆ ಸೇರಿದ ಸ್ವಲ್ಪ ದಿನದಲ್ಲಿ ವಿಶ್ವದ ದೊಡ್ಡ ಬೆಕ್ಕು ಸಾವನ್ನಪ್ಪಿದೆ. ಈ ಬೆಕ್ಕು ಕಳೆದ ಶನಿವಾರ ಸಾವನ್ನಪ್ಪಿರುವುದಾಗಿ ವರದಿಗಳು ಹೇಳಿವೆ.


ಕ್ಯಾನ್ಸರ್ ಗೆಡ್ಡೆ ಬೆಳದಿತ್ತು
ವಿಶ್ವದ ದಪ್ಪ ಬೆಕ್ಕಿನ ಸಾವಿನ ಬಗ್ಗೆ ಮಾತನಾಡಿದ ಪಶುವೈದ್ಯರು ತೂಕ ಹೆಚ್ಚಾಗಿ ಕೊಬ್ಬು ಅತ್ಯಧಿಕವಾಗಿತ್ತು, ಇದು ಬೆಕ್ಕಿನ ಗುಲ್ಮ ಮತ್ತು ಇತರ ಆಂತರಿಕ ಅಂಗಗಳ ಮೇಲೆ ಕ್ಯಾನ್ಸರ್ ಗೆಡ್ಡೆಗಳು ಬೆಳೆಯಲು ಕಾರಣವಾಗಿತ್ತು. ಕ್ಯಾನ್ಸರ್ ಇದ್ದದ್ದೂ ತುಂಬಾ ತಡವಾಗಿ ಬೆಳಕಿಗೆ ಬಂತು ಎಂದು ವೈದ್ಯರು ಹೇಳಿದ್ದಾರೆ.


ನಮ್ಮಿಂದ ಅಲ್ಟ್ರಾಸೌಂಡ್ ಮಾಡಿಸಲು ಸಾಧ್ಯವಾಗಲಿಲ್ಲ. ಆದರೆ, ನಾವು ನಿರಂತರವಾಗಿ ಕ್ರಂಬ್ಸ್ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಿದ್ದೇವೆ. ಅಧಿಕ ತೂಕವು ಸುಮ್ಮನೇ ಸಂಭವಿಸುವುದಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಹೀಗಾಗಿ ಕ್ರಂಬ್ಸ್ ಆರೋಗ್ಯದ ಮೇಲೆ ನಿಗಾವಹಿಸಿದ್ದೆವು. ಸಾವಿಗೂ ಕೆಲವು ವಾರಗಳ ಮುಂಚೆ ಬೆಕ್ಕಿನಲ್ಲಿ ಅನಾರೋಗ್ಯದ ಯಾವುದೇ ಲಕ್ಷಣಗಳನ್ನು ಕಂಡುಬರಲಿಲ್ಲ ಎಂದು ಬೆಕ್ಕಿನ ಮಾಲೀಕರು ತಿಳಿಸಿದ್ದಾರೆ.

ಬೆಕ್ಕಿಗಿರುವ ಸಮಸ್ಯೆ ನಮಗೆ ಮೊದಲು ತಿಳಿಯಲಿಲ್ಲ. ನಮ್ಮಿಂದ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ನೆನೆಸಿಸಿಕೊಂಡರೆ ತುಂಬಾ ನೋವಾಗುತ್ತದೆ. ನಿಜಕ್ಕೂ ಇದು ನಮಗೆ ದೊಡ್ಡ ನಷ್ಟವಾಗಿದೆ. ಏಕೆಂದರೆ, ಕ್ರೋಶಿಕ್ ಪ್ರತಿಯೊಬ್ಬರ ಭರವಸೆಯ ಸಂಕೇತವಾಗಿತ್ತು ಮತ್ತು ನಾವು ಒಳ್ಳೆಯ ಸುದ್ದಿಯನ್ನು ನೀಡಲು ಬಯಸಿದ್ದೆವು. ಆದರೆ, ಇದು ನೋವಿನ ಸಂಗತಿಯಾಗಿದೆ ಎಂದು ಬೆಕ್ಕಿನ ಸಾವಿನ ಬಗ್ಗೆ ಮಾತನಾಡುತ್ತಾ ಮಾಲೀಕರು ಕಣ್ಣೀರು ಹಾಕಿದರು.

Join Whatsapp
Exit mobile version