Home ಕರಾವಳಿ ಇಬ್ಬರು ಹೆಣ್ಣು ಮಕ್ಕಳ ತಾಯಿ, ಗ್ರಾ.ಪಂ. ಅಧ್ಯಕ್ಷೆಯ ಪಿಯುಸಿ ಸಾಧನೆ

ಇಬ್ಬರು ಹೆಣ್ಣು ಮಕ್ಕಳ ತಾಯಿ, ಗ್ರಾ.ಪಂ. ಅಧ್ಯಕ್ಷೆಯ ಪಿಯುಸಿ ಸಾಧನೆ

ಪುತ್ತೂರು: ತಾಲೂಕಿನ ಪಾಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ 38ರ ಭಾರತಿ ಭಟ್ ಅವರು ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು 421 ಅಂಕ ಪಡೆದು ಪಾಸಾಗಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳು ಅದಿತಿ 8ನೇ ತರಗತಿ, ಅನಘಾ 6ನೇ ತರಗತಿ ಓದುತ್ತಿದ್ದಾರೆ.

23 ವರುಷಗಳ ಹಿಂದೆ ತಂದೆ ಸತ್ತ ಕಾರಣ 8ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ್ದ ಭಾರತಿ ಭಟ್ 2021- 22ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು 54% ಅಂಕ ಪಡೆದು ಪಾಸಾಗಿದ್ದರು.

ಕಾಸರಗೋಡಿನ ಬದಿಯಡ್ಕ ಚಾಂಗುಳಿ ವೆಂಕಟ್ರಮಣ ಭಟ್ ಅವರನ್ನು ವಿವಾಹವಾಗಿ ಪಾಣಾಜೆಯಲ್ಲಿ ವಾಸವಾಗಿರುವ ಅವರು, ಎರಡು ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು.  

Join Whatsapp
Exit mobile version