Home ಜಾಲತಾಣದಿಂದ ಮೇ ಡೇ ಮುಕ್ತವಾಗಿ ಆಚರಿಸಲು ಎಲ್ಲಾ ಕಾರ್ಮಿಕ ಯೂನಿಯನ್‌ಗಳಿಗೂ ಅವಕಾಶ ನೀಡಿ: SDTU

ಮೇ ಡೇ ಮುಕ್ತವಾಗಿ ಆಚರಿಸಲು ಎಲ್ಲಾ ಕಾರ್ಮಿಕ ಯೂನಿಯನ್‌ಗಳಿಗೂ ಅವಕಾಶ ನೀಡಿ: SDTU

ಬೆಂಗಳೂರು: ಮೇ ಡೇ ಮುಕ್ತವಾಗಿ ಆಚರಿಸಲು ಎಲ್ಲಾ ಕಾರ್ಮಿಕ ಯೂನಿಯನ್ ಗಳಿಗೂ ಅವಕಾಶ ನೀಡಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU ) ರಾಜ್ಯಾಧ್ಯಕ್ಷ ಫಝಲುಲ್ಲಾ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಮೇ 10 ರಂದು ನಡೆಯುವ ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು ಕಾರ್ಮಿಕರ ಹಿತ ಬಯಸಿ ಅವರ ಹಕ್ಕು ಮತ್ತು ಅವಕಾಶಗಳಿಗಾಗಿ ಜಾಗೃತಿ ಮೂಡಿಸಲು ಸಂಘಟಿತಾರಾದ ಎಲ್ಲಾ ಯೂನಿಯನ್‌ಗಳಿಗೂ ಚುನಾವಣಾ ಆಯೋಗ ಮೇ ಡೇ ಆಚರಿಸಲು ಮುಕ್ತ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆ ಹಾಗೂ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮೇ 1ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಮೇ ಡೇ ದುಡಿಯುವ ಕೋಟ್ಯಾಂತರ ಜನರ ಪಾಲಿನ ಹಬ್ಬವಾಗಿದೆ ಯಾವುದೇ ದೇಶ ರಾಜ್ಯದ ಅಭಿವೃದ್ಧಿ ಆಯಾ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ ದಕ್ಷ ಕಾರ್ಮಿಕರ ವರ್ಗದಿಂದ ದೇಶದ ಆರ್ಥಿಕ ಪ್ರಗತಿಯನ್ನು ಕಾಣಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಕಾರ್ಮಿಕರ ಹಕ್ಕು ಮತ್ತು ಅವಕಾಶಗಳಿಗಾಗಿ ನಡೆಸಿದ ಹೋರಾಟ ತ್ಯಾಗದ ಫಲ ಜಗತ್ತಿನಾದ್ಯಂತ ಕಾರ್ಮಿಕ ಕಾನೂನುಗಳು ಕ್ಷೇಮಭಿವೃದ್ಧಿ ಶಾಸನಗಳು ರೂಪುಗೊಂಡವು. ಕಾರ್ಮಿಕರ ಹಿತ ಬಯಸಿ ಅವರ ಹಕ್ಕು ಮತ್ತು ಅವಕಾಶಗಳಿಗಾಗಿ ಜಾಗೃತಿ ಮೂಡಿಸಲು ಸಂಘಟಿತಾರಾದ ಎಲ್ಲಾ ಯೂನಿಯನ್ ಗಳಿಗೂ ಚುನಾವಣಾ ಆಯೋಗ ಮೇ ಡೇ ಆಚರಿಸಲು ಮುಕ್ತ ಅವಕಾಶ ನೀಡಬೇಕೆಂದು ಫಝಲುಲ್ಲಾ ಒತ್ತಾಯಿಸಿದ್ದಾರೆ.

Join Whatsapp
Exit mobile version