ಚೆನ್ನೈ: ಬಂದೂಕು ಹಿಡಿದು ಸನ್ಯಾಸಿಯೋರ್ವ ಬ್ಯಾಂಕ್ ಗೆ ನುಗ್ಗಿ ಲೂಟಿ ಮಾಡುವುದಾಗಿ ಬೆದರಿಕೆಯೊಡ್ಡಿರುವ ಘಟನೆ ತಮಿಳುನಾಡಿನ ತಿರುವಾರೂರಿನಲ್ಲಿ ನಡೆದಿದೆ.
ಸನ್ಯಾಸಿಯನ್ನು ತಿರುಮಲೈ ಸಾಮಿ ಎಂದು ಗುರುತಿಸಲಾಗಿದ್ದು, ಈತ ಚೀನಾದಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ತನ್ನ ಮಗಳಿಗೆ ಸಾಲ ನೀಡುವಂತೆ ಕೇಳಲು ಖಾಸಗಿ ವಲಯದ ಬ್ಯಾಂಕ್ ಮೊರೆ ಹೋಗಿದ್ದನು. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಆಸ್ತಿ ದಾಖಲೆ ನೀಡುವಂತೆ ಕೇಳಿದ್ದು, ಇದಕ್ಕೆ ತಿರುಮಲೈ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ಹಿನ್ನೆಲೆ ಬ್ಯಾಂಕ್ ಅಧಿಕಾರಿಗಳು ತಿರುಮಲೈ ಸಾಮಿ ಸಲ್ಲಿಸಿದ್ದ ಸಾಲದ ಅರ್ಜಿಯನ್ನು ತಿರಸ್ಕರಿಸಿದರು. ಇದರಿಂದ ಕೋಪಗೊಂಡ ತಿರುಮಲೈ ಸಾಮಿ ಬಂದೂಕು ಹಿಡಿದು ಬ್ಯಾಂಕಿಗೆ ಬಂದು ಬೆದರಿಕೆ ಹಾಕಿದ್ದಾರೆ.
ಪೊಲೀಸರು ಬ್ಯಾಂಕ್ ಗೆ ಆಗಮಿಸಿ ಸನ್ಯಾಸಿಯನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.