2025 ರಲ್ಲಿ RSS ತನ್ನ 100 ನೇ ವಾರ್ಷಿಕೋತ್ಸವವನ್ನು ಆಚರಿಸುವಾಗ ದೇಶದ ಪ್ರತಿ ಮನೆಯಲ್ಲಿ ಒಬ್ಬ ಕಾರ್ಯಕರ್ತನನ್ನು ಹೊಂದುವ ಗುರಿಯಿದೆ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಲ್ಕು ವರ್ಷಗಳೊಳಗೆ ಸ್ವಯಂಸೇವಕರು ಎಲ್ಲಾ ಗ್ರಾಮಗಳಲ್ಲಿ ತಮ್ಮ ಶಾಖೆಗಳನ್ನು ವಿಸ್ತರಿಸಿ ಪ್ರತಿ ಮನೆಯಲ್ಲೂ ಒಬ್ಬ ಕಾರ್ಯಕರ್ತನನ್ನು ಹೊಂದಲು ಶ್ರಮಿಸಬೇಕು ಎಂದು ಅವರು ಹೇಳಿದರು. ಜಾರ್ಖಂಡ್‌ನಲ್ಲಿ ಆರೆಸ್ಸೆಸ್ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಧನಬಾದ್ ಗೆ ಆಗಮಿಸಿದ ಅವರು ಜಾರ್ಖಂಡ್ ಮತ್ತು ಬಿಹಾರದ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆರ್‌ಎಸ್‌ಎಸ್ ಕಾರ್ಯಕರ್ತರ ಜೀವನವನ್ನು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿಸಬೇಕು ಎಂದು ಅವರು ಈ ವೇಳೆ ಹೇಳಿದರು.
ಅವರು ಇಂದು ಮತ್ತು ನಾಳೆ ರಾಜ್ಯದ 100 ಗಣ್ಯರನ್ನು ಭೇಟಿ ಮಾಡಲಿದ್ದಾರೆ. ದೇಶದ ಎಲ್ಲ ಜನರನ್ನು ಹಿಂದೂಗಳಂತೆ ಕಾಣುವುದೆಂಬ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.