Home ಟಾಪ್ ಸುದ್ದಿಗಳು ಇಸ್ರೇಲ್ ಜೈಲಿನಿಂದ ಪರಾರಿಯಾದ 2 ಕೈದಿಗಳನ್ನು ವಶಕ್ಕೆ ಪಡೆದ ಪೊಲೀಸರು

ಇಸ್ರೇಲ್ ಜೈಲಿನಿಂದ ಪರಾರಿಯಾದ 2 ಕೈದಿಗಳನ್ನು ವಶಕ್ಕೆ ಪಡೆದ ಪೊಲೀಸರು

ನಝರತ್: ಗರಿಷ್ಟ ಭದ್ರತೆಯಿರುವ ಇಸ್ರೇಲ್ ನ ಗಿಲ್ಬೋವಾ ಜೈಲಿನಿಂದ ತಪ್ಪಿಸುವಲ್ಲಿ ಯಶಸ್ವಿಯಾದ ಆರು ಮಂದಿ ಫೆಲೆಸ್ತೀನ್ ಕೈದಿಗಳ ಪೈಕಿ ಇಬ್ಬರನ್ನು ಮರಳಿ ವಶಕ್ಕೆ ಪಡೆಯಲಾಗಿದೆ. ಇಸ್ರೇಲ್ ನ ಉತ್ತರ ನಗರವಾದ ನಝರತ್ ಎಂಬಲ್ಲಿನ ಬೈಬಲ್ ಬೆಟ್ಟದಿಂದ ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಲೆಸ್ತೀನ್ ವಶದಲ್ಲಿರುವ ನಝರತ್ ಎಂಬಲ್ಲಿ ಇಸ್ರೇಲ್ ನಡೆಸಿದ ಭಾರೀ ಕಾರ್ಯಾಚರಣೆಯ ಹೊರತಾಗಿಯೂ ಉಳಿದ ನಾಲ್ವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ತಪ್ಪಿಸಿಕೊಂಡ ಆರು ಮಂದಿ ಕೈದಿಗಳ ಪೈಕಿ ಐದು ಮಂದಿ ಇಸ್ಲಾಮಿಕ್ ಚಳುವಳಿ ಸಂಘಟನೆಗೆ ಸೇರಿದರೆ, ಒಬ್ಬ ರಾಜಕೀಯ ವೇದಿಕೆಯಾದ ಫತಾಹ್ ಪಕ್ಷದ ಮುಂಚೂಣಿ ನಾಯಕ ಎಂದು ಹೇಳಲಾಗುತ್ತಿದೆ. ಈ ಆರು ಮಂದಿ ತಮ್ಮ ಸೆಲ್ ನ ಶೌಚಾಲಯದಲ್ಲಿ ರಂಧ್ರವನ್ನು ಕೊರೆದು ಸುರಂಗದ ಮೂಲಕ ಸೋಮವಾರ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಈ ಬೆಳವಣಿಗೆಯಿಂದಾಗಿ ಫೆಲೆಸ್ತಿನ್ ನ ಇಸ್ಲಾಮಿಕ್ ಚಳುವಳಿ ಸಂಘಟನೆಗಳು ಮತ್ತು ಹಮಾಸ್ ಸಂಭ್ರಮಾಚರಣೆ ನಡೆಸಿ ಇಸ್ರೇಲ್ ತಿರುಗೇಟು ನೀಡಿತ್ತು.

ಮೌಂಟ್ ನಲ್ಲಿ ಸೆರೆಯಾದ ಇಬ್ಬರು ಇಸ್ಲಾಮಿಕ್ ಸಂಘಟನೆಯ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ. ನಝರತ್ ನಿವಾಸಿಗಳಲ್ಲಿ ಆಹಾರ ನೀಡುವಂತೆ ಕೇಳಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ನೀಡಿದ ಸುಳಿವಿನ ಆಧಾರದಲ್ಲಿ ಈ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ.

ಬಂಧನಕ್ಕೊಳಗಾದ ಇಬ್ಬರು ಕೈದಿಗಳ ಜೀವನಕ್ಕೆ ನಾವು ಇಸ್ರೇಲ್ ಅನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಇಸ್ಲಾಮಿಕ್ ಚಳುವಳಿಯ ವಕ್ತಾರ ದೌದ್ ಶೆಹಾಬ್ ತಿಳಿಸಿದರು.

Join Whatsapp
Exit mobile version