Home ಟಾಪ್ ಸುದ್ದಿಗಳು ನವಜಾತ ಶಿಶುವಿನೊಂದಿಗೆ ಅಧಿವೇಶನಕ್ಕೆ ಹಾಜರಾದ ಶಾಸಕಿ: ವ್ಯಾಪಕ ಶ್ಲಾಘನೆ

ನವಜಾತ ಶಿಶುವಿನೊಂದಿಗೆ ಅಧಿವೇಶನಕ್ಕೆ ಹಾಜರಾದ ಶಾಸಕಿ: ವ್ಯಾಪಕ ಶ್ಲಾಘನೆ

ಮಹಾರಾಷ್ಟ್ರ: ಮಹಾರಾಷ್ಟ್ರದ ದಿಯೋಲಾಲಿ ಅಸೆಂಬ್ಲಿಯ ಶಾಸಕಿ ತನ್ನ ಎರಡೂವರೆ ತಿಂಗಳ ಮಗುವನ್ನು ವಿಧಾನಸಭೆಗೆ ಕರೆದುಕೊಂಡು ಬಂದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಶ್ಲಾಘನೆಗೆ ಒಳಗಾಗಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶಾಸಕ ಸರೋಜ್ ಬಾಬುಲಾಲ್ ಅಹಿರೆ ಅವರು ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು (ಸೋಮವಾರ) ತಮ್ಮ ನವಜಾತ ಶಿಶುವಿನೊಂದಿಗೆ ಮಹಾರಾಷ್ಟ್ರ ವಿಧಾನಸಭೆಗೆ ಆಗಮಿಸಿದರು. ಅವರು ಸೆಪ್ಟೆಂಬರ್ 30 ರಂದು ಮಗುವಿಗೆ ಜನ್ಮ ನೀಡಿದರು.

ಕಳೆದ ಎರಡೂವರೆ ವರ್ಷಗಳಿಂದ ನಾಗ್ಪುರದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಅಧಿವೇಶನ ನಡೆದಿಲ್ಲ. ನಾನು ಈಗ ತಾಯಿಯಾಗಿದ್ದೇನೆ ಆದರೆ ನನ್ನ ಮತದಾರರಿಗೆ ಉತ್ತರಗಳನ್ನು ಪಡೆಯಲು ಬಂದಿದ್ದೇನೆ” ಎಂದು ಅವರು ಮಾದ್ಯಮಗಳಿಗೆ ತಿಳಿಸಿದರು.

Join Whatsapp
Exit mobile version