Home ಟಾಪ್ ಸುದ್ದಿಗಳು ಬೆಳಗಾವಿ ವಿವಾದಕ್ಕಿಂತ ಮೊದಲು ಮಹದಾಯಿ ವಿವಾದ ಬಗೆಹರಿಯಲಿ: ಸಿ.ಎಂ. ಇಬ್ರಾಹಿಂ

ಬೆಳಗಾವಿ ವಿವಾದಕ್ಕಿಂತ ಮೊದಲು ಮಹದಾಯಿ ವಿವಾದ ಬಗೆಹರಿಯಲಿ: ಸಿ.ಎಂ. ಇಬ್ರಾಹಿಂ

ಬಾಗಲಕೋಟೆ: ಕರ್ನಾಟಕದಲ್ಲಿ ಮರಾಠಿಗರು ಆರಾಮವಾಗಿದ್ದಾರೆ, ಸರ್ಕಾರ ಬೆಳಗಾವಿಯ ವಿವಾದವನ್ನು ಸರಿಪಡಿಸುವ ಮೊದಲು ಮಹದಾಯಿ ವಿವಾದ ಬಗೆಹರಿಸಲು ಮುಂದಾಗಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತನಾಡಿ ಮಹದಾಯಿ ಬಗೆಹರಿಸಲಿ ಎಂದು ಹೇಳಿದರು.


ಅವರೆಲ್ಲ ಸೇರಿ ನಮ್ಮ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದಾರೆ. ಕೆಲಸ ಮಾಡಲಿ, ಮಾಡದೇ ಇರಲಿ. 4 ತಿಂಗಳ ಬಳಿಕ ನಾವು ಅಮಿತ್ ಶಾಗೂ ಕೇಳಲ್ಲ, ಡೆಲ್ಲಿಗೂ ಕೇಳಲ್ಲ. ನಾವೇ ನಮ್ಮ ನಾಡು, ನಮ್ಮ ನೀರು, ನಮ್ಮ ಹಕ್ಕು ಅಂತ ಹೋರಾಡುತ್ತೇವೆ. ಅವರನ್ನು ಒದ್ದು ಹೊರಗೆ ಹಾಕಿ ನಾವೇ ಕೆಲಸ ಮಾಡುತ್ತೇವೆಂದು ಇಬ್ರಾಹಿಂ ಎಚ್ಚರಿಕೆ ನೀಡಿದರು.

Join Whatsapp
Exit mobile version