ನಾಪತ್ತೆಯಾಗಿದ್ದ ಶ್ರೀಲಂಕಾ ಅಧ್ಯಕ್ಷ ಪ್ರತ್ಯಕ್ಷ; ಅಜ್ಞಾತಸ್ಥಳದಿಂದ ಕರ್ತವ್ಯ ಆರಂಭಿಸಿದ ರಾಜಪಕ್ಸೆ

Prasthutha|

ಕೊಲಂಬೋ; ಆರ್ಥಿಕ ಬಿಕ್ಕಟ್ಟಿನ ಬಳಿಕ ಜನರ ಆಕ್ರೋಶ ಎದುರಿಸಲಾರದೆ ನಾಪತ್ತೆಯಾಗಿದ್ದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಈಗ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.

- Advertisement -

ಅದಾಗ್ಯೂ ಅಧ್ಯಕ್ಷರು ಎಲ್ಲಿದ್ದಾರೆ ಎಂದು ತಿಳಿದು ಬಂದಿಲ್ಲ. ಹಸಿವಿನಿಂದ ಬಳಲುತ್ತಿರುವ ದೇಶಕ್ಕೆ 3,700 ಮೆಟ್ರಿಕ್ ಟನ್ ಎಲ್‌ ಪಿ ಗ್ಯಾಸ್ ದೊರೆತ ನಂತರ ಅಡುಗೆ ಅನಿಲವನ್ನು ಸುಗಮವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ಭಾನುವಾರ ತಿಳಿಸಿದೆ.

ಇಂದು ಮಧ್ಯಾಹ್ನ ಮೊದಲ ಹಡಗು ಕೆರವಲಪಿಟಿಯಕ್ಕೆ ಆಗಮಿಸಿ ಅನಿಲ್ ವನ್ನು ಇಳಿಸಿತ್ತು. ಇದಾದ ತಕ್ಷಣ ಅನಿಲ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ರಾಜಪಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

- Advertisement -

3,740 ಮೆಟ್ರಿಕ್ ಟನ್ ಅನಿಲವನ್ನು ಸಾಗಿಸುವ ಎರಡನೇ ಹಡಗು ಜುಲೈ 11 ರಂದು ಬರಲಿದೆ ಮತ್ತು 3,200 ಮೆಟ್ರಿಕ್ ಟನ್ ಅನಿಲ ಹೊತ್ತ ಮೂರನೇ ಹಡಗು ಜುಲೈ 15 ರಂದು ತಲುಪಲಿದೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ ಶ್ರೀಲಂಕಾ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ನಿವಾಸದ ಆವರಣದಲ್ಲಿ ಪ್ರತಿಭಟನಕಾರರು ಅಲ್ಲೇ ನೆಲೆಸಿ ಅಡುಗೆ ಕೂಡ ಮಾಡಿದ್ದಾರೆ.

ಪ್ರಧಾನಿ ವಿಕ್ರಮಸಿಂಘೆ ಹಾಗೂ ಅಧ್ಯಕ್ಷ ರಾಜಪಕ್ಸೆ ತೊಲಗುವವರೆಗೂ ನಾವು ಇಲ್ಲೆ ಇರುತ್ತೇವೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

Join Whatsapp
Exit mobile version