ದ್ವಿಚಕ್ರ ವಾಹನ ಅಪಘಾತ: ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೃತ್ಯು

Prasthutha|

ಅಲಪ್ಪುಝ: ದ್ವಿಚಕ್ರ ವಾಹನ ಅಪಘಾತ ಸಂಭವಿಸಿ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕೇರಳದ ಅಲುವಾದಲ್ಲಿ ನಡೆದಿದೆ.

- Advertisement -

ಫೌಜಿಯಾ ಹಕೀಂ (21) ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.

ಮಂಗಳೂರಿನಿಂದ ರೈಲಿನಲ್ಲಿ ಅಲುವಾ ತಲುಪಿದ ಫೌಜಿಯಾ ಸ್ಕೂಟರ್ ನಲ್ಲಿ ಮನೆಯತ್ತ ಬರುವಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡುವಾಗ, ಸ್ಕೂಟರ್ ನಿಯಂತ್ರಣ ಕಳೆದುಕೊಂಡು ನೀರಿಗೆ ಇಳಿದಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Join Whatsapp
Exit mobile version