Home ಟಾಪ್ ಸುದ್ದಿಗಳು ವಿರೋಧಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲ್ಲ ಎಂದ ಮಾಯಾವತಿ

ವಿರೋಧಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲ್ಲ ಎಂದ ಮಾಯಾವತಿ

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಲು ವಿರೋಧಪಕ್ಷಗಳ ನಾಯಕರು ಶುಕ್ರವಾರ ನಡೆಸುವ ಚಿಂತನ ಶಿಬಿರದಲ್ಲಿ ಬಿಎಸ್ಪಿ ಪಕ್ಷ ಭಾಗವಹಿಸುವುದಿಲ್ಲ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಮಾಯಾವತಿ, ಹಣದುಬ್ಬರ, ಬಡತನ, ನಿರುದ್ಯೋಗ, ಅನಕ್ಷರತೆ, ಜಾತಿ ದ್ವೇಷ, ಧಾರ್ಮಿಕ ಹಿಂಸಾಚಾರ ಇತ್ಯಾದಿಗಳಿಂದ ನರಳುತ್ತಿರುವ ದೇಶದ ಸ್ಥಿತಿ ನೋಡಿದರೆ ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನ ಸರಿಯಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗಿಲ್ಲ ಎಂದು ಮಾಯಾವತಿ ಹೇಳಿದ್ದಾರೆ. ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು ವಿರೋಧ ಪಕ್ಷದ ನಾಯಕರ ಸಭೆಯು ದಿಲ್ ಮಿಲೇ ನಾ ಮಿಲೇ ಹಾಥ್ ಮಿಲಾತೇ ರಹೀಯೇ (ಯೋಚನೆಗಳು ಒಂದೇ ಇರದಿದ್ದರೂ, ಕೈಕುಲುಕುತ್ತಲೇ ಇರಿ) ಎಂಬ ನುಡಿಗಟ್ಟನ್ನು ನೆನಪಿಸುತ್ತದೆ ಎಂದಿದ್ದಾರೆ.

Join Whatsapp
Exit mobile version