ಬೆಂಗಳೂರು: ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕವನ್ನು ತುಂಡು ತುಂಡು ಮಾಡಲಾಗಿದ್ದು, ಕಿಡಿಗೇಡಿಗಳ ಕೃತ್ಯವೋ, ಯಾವುದೋ ವಾಹನ ಗುದ್ದಿ ಹೀಗಾಗಿದೆಯೋ ದೃಢವಾಗಿಲ್ಲ.
ನೆನಪಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುನದಹಳ್ಳಿ ರಸ್ತೆಗೆ 2020ರಲ್ಲಿ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರಿಡಲಾಗಿತ್ತು. ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರಿನ ನಾಮಫಲಕವನ್ನು ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಉದ್ಘಾಟಿಸಿದ್ದರು.
ಹುತಾತ್ಮರ ನಾಮಫಲಕ ಧ್ವಂಸದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ನಾಗರಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.