Home ಟಾಪ್ ಸುದ್ದಿಗಳು ಅಮೇರಿಕಕ್ಕೆ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ್ಯು

ಅಮೇರಿಕಕ್ಕೆ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ್ಯು

ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದ ತಲಾ ಒಬ್ಬರು ವಿದ್ಯಾರ್ಥಿಗಳು ಅಮೇರಿಕದ ನ್ಯೂಯಾರ್ಕ್‌ನಲ್ಲಿರುವ ತಮ್ಮ ಕನೆಕ್ಟಿಕಟ್ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ತೆಲಂಗಾಣದ ವನಪರ್ತಿಯ ಜಿ ದಿನೇಶ್ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ನಿಕೇಶ್ (21) ಮೃತ ವಿದ್ಯಾರ್ಥಿಗಳು.

ದಿನೇಶ್ ಡಿಸೆಂಬರ್ 28, 2023 ರಂದು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ಗೆ ಹೋಗಿದ್ದರು. ನಿಕೇಶ್ ಕೆಲವು ದಿನಗಳ ನಂತರ ತಲುಪಿದರು. ಪರಸ್ಪರ ಗೊತ್ತಿರುವ ಗೆಳೆಯರು ಇದ್ದ ಕಾರಣ ಇವರಿಬ್ಬರು ಪರಸ್ಪರ ಸ್ನೇಹಿತರಾಗಿದ್ದರು. ಅಮೆರಿಕಕ್ಕೆ ಹೋದ ನಂತರ ಒಂದೇ ರೂಂ ನಲ್ಲಿ ವಾಸ ಮಾಡುತ್ತಿದ್ದರು.ಮೃತ ದಿನೇಶ್ ಸ್ನೇಹಿತರು ಶನಿವಾರ ರಾತ್ರಿ ನಮಗೆ ಕರೆ ಮಾಡಿ ಅವರ ಸಾವಿನ ಬಗ್ಗೆ ತಿಳಿಸಿದರು. ಅವರು ಹೇಗೆ ಸತ್ತರು ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ದಿನೇಶ್​ ಕುಟುಂಬಸ್ಥರು ತಿಳಿಸಿದ್ದಾರೆ.

ದಿನೇಶ್ ಅವರ ಮೃತದೇಹ ತರಲು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಸಹಾಯ ಕೋರಿದ್ದೇವೆ. ವನಪರ್ತಿ ಶಾಸಕಿ ಮೇಘಾ ರೆಡ್ಡಿ ಕೂಡ ದಿನೇಶ್ ಮೃತದೇಹವನ್ನು ತರಲು ಸಹಾಯ ಮಾಡಿದ್ದಾರೆ. ಅವರು ವಿದ್ಯಾರ್ಥಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು ಎಂದು ದಿನೇಶ್​ ಕುಟುಂಬಸ್ಥರು ಹೇಳಿದ್ದಾರೆ.

Join Whatsapp
Exit mobile version