ದಾವಣಗೆರೆ: ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಬಳಸಿದ್ದನ್ನು ನಾನು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಸರ್ಜಿಕಲ್ ಸ್ಟ್ರೈಕ್ ವಿಚಾರ ಏಕವಚನ ಪದ ಬಳಕೆ ಮಾಡಿದ್ದರು. ಅದು ಕೂಡ ತಪ್ಪೇ ಆಗಿದೆ. ಯಾರೇ ಆಗಲಿ ಏಕವಚನದಲ್ಲಿ ಮಾತನಾಡಬಾರದು ಎಂದು ಅವರು ಹೇಳಿದ್ದಾರೆ.
ಬಿಜೆಪಿಗೆ ಒಂದು ಸಿದ್ಧಾಂತ ಇದೆ. ಅನಂತ್ ಕುಮಾರ್ ಹೆಗಡೆ ಆಗಲಿ, ಯಾರೇ ಆಗಲಿ ಆರೋಗ್ಯಕರವಾಗಿ ಟೀಕೆ, ಟಿಪ್ಪಣಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.