Home ಟಾಪ್ ಸುದ್ದಿಗಳು ಕಾಳಿ ದೇವಿ ವಿಗ್ರಹದ ಪಾದದ ಮೇಲೆ ವ್ಯಕ್ತಿಯ ಕತ್ತರಿಸಿದ ತಲೆ ಪತ್ತೆ !

ಕಾಳಿ ದೇವಿ ವಿಗ್ರಹದ ಪಾದದ ಮೇಲೆ ವ್ಯಕ್ತಿಯ ಕತ್ತರಿಸಿದ ತಲೆ ಪತ್ತೆ !

ಹೈದರಾಬಾದ್: ಕಾಳಿ ಮಾತೆಯ ವಿಗ್ರಹದ ಪಾದದ ಬುಡದಲ್ಲಿ ವ್ಯಕ್ತಿಯ ಕತ್ತರಿಸಿದ ತಲೆ ಪತ್ತೆಯಾದ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ರಸ್ತೆ ಬದಿಯಲ್ಲಿ ಕಂಡುಬಂದಿದೆ.

ಆ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದು, ರಸ್ತೆ ಬದಿಯಲ್ಲಿ ಕತ್ತರಿಸಿದ ರುಂಡ ಇಟ್ಟಿರುವ ಆಘಾತಕಾರಿ ಘಟನೆಯಿಂದ ಸುತ್ತಮುತ್ತಲಿನ ಜನರು ಶಾಕ್ ಆಗಿದ್ದಾರೆ.

ಕಾಳಿ ದೇವಿ ಮೂರ್ತಿಯ ಪಾದದ ಮೇಲೆ ತಲೆ ಇಟ್ಟ ರೀತಿಯನ್ನು ನೋಡಿದರೆ ಇದು ನರಬಲಿ ಇರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಇದು ಕೊಲೆಯೋ ಅಥವಾ ನರಬಲಿಯೋ ಎಂಬುದು ತನಿಖೆಯ ಬಳಿಕ ಖಚಿತವಾಗಲಿದೆ.

ಕೊಲೆಯಾದ ವ್ಯಕ್ತಿ ಯಾರೆಂದು ಪತ್ತೆಹಚ್ಚಲು ಹಾಗೂ ಕೊಲೆಗಾರರನ್ನು ಹುಡುಕಲು ಪೊಲೀಸರು 8 ತಂಡಗಳನ್ನು ರಚಿಸಿದ್ದಾರೆ.

Join Whatsapp
Exit mobile version