Home ಟಾಪ್ ಸುದ್ದಿಗಳು ಬುಲ್ಲಿ ಬಾಯಿ ಪ್ರಕರಣದಲ್ಲಿ ದೂರುದಾರನಿಗೆ ಬೆದರಿಕೆ ಕರೆ : ಪೊಲೀಸರಿಗೆ ದೂರು

ಬುಲ್ಲಿ ಬಾಯಿ ಪ್ರಕರಣದಲ್ಲಿ ದೂರುದಾರನಿಗೆ ಬೆದರಿಕೆ ಕರೆ : ಪೊಲೀಸರಿಗೆ ದೂರು

ನವದೆಹಲಿ: ಬುಲ್ಲಿ ಬಾಯಿ ಪ್ರಕರಣದ ದೂರುದಾರನಿಗೆ ಅಪರಿಚಿತರು ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಮುಂಬೈ ಸೈಬರ್ ಕ್ರೈಮ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ NC ದಾಖಲಿಸಿಕೊಂಡಿದ್ದಾರೆ.

ಹೊಸ ವರ್ಷದ ಮುನ್ನಾ ದಿನದಂದು ಬುಲ್ಲಿ ಬಾಯಿ ಆ್ಯಪ್ ನಲ್ಲಿ 126 ಮುಸ್ಲಿಮ್ ಮಹಿಳೆಯರನ್ನು ಆನ್ ಲೈನ್ ನಲ್ಲಿ ಹರಾಜು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿತ್ತು.

ಆ್ಯಪ್ ರಚನೆಕಾರರ ವಿರುದ್ಧ ಕನಿಷ್ಠ ಐದು ರಾಜ್ಯಗಳಲ್ಲಿ ದೂರು ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಭಾಗಗಳಿಂದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು.

Join Whatsapp
Exit mobile version