Home ಟಾಪ್ ಸುದ್ದಿಗಳು ಕಾವೇರುತ್ತಿರುವ ಉ.ಪ್ರ ಚುನಾವಣೆ: ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ ಬಿಲ್ಸಿ ಶಾಸಕ ರಾಧಾಕೃಷ್ಣ

ಕಾವೇರುತ್ತಿರುವ ಉ.ಪ್ರ ಚುನಾವಣೆ: ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ ಬಿಲ್ಸಿ ಶಾಸಕ ರಾಧಾಕೃಷ್ಣ

ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿಯ ಬಿಲ್ಸಿ ಶಾಸಕ ರಾಧಾಕೃಷ್ಣ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಉತ್ತರ ಪ್ರದೇಶದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಧಕೃಷ್ಣ ಅವರು ಎಂಬತ್ತೆರಡೂ ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರೆ, ಬಿಎಸ್ಪಿ ಮತ್ತು ಎಸ್ಪಿ ಅಭ್ಯರ್ಥಿಗಳು ಕ್ರಮವಾಗಿ 55,091 ಮತ್ತು 50, 848 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಈ ಮಧ್ಯೆ ಬಹ್ರೈಚ್ ಜಿಲ್ಲೆಯ ನಾನ್ ಪಾರದಿಂದ ಬಿಜೆಪಿ ಶಾಸಕಿ ಮಾಧುರಿ ವರ್ಮಾ ಕೂಡ ಎಸ್ಪಿಗೆ ಸೇರಿದ್ದರಿಂದ ಬಿಜೆಪಿ ಪಕ್ಷಕ್ಕೆ ಎರಡನೇ ಆಘಾತವಾಗಿದೆ. ಮುಂಬರುವ ಚುನಾವಣೆಗೂ ಮುನ್ನ ಬಿಜೆಪಿಯ ಇನ್ನಷ್ಟು ಮುಖಂಡರು ಎಸ್ಪಿ ಪಕ್ಷ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಗೆಲುವು ಸಾಧಿಸುವ ವಿಶ್ವಾಸವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆಗೆ ಸಾರ್ವಜನಿಕರು ಬೇಸತ್ತಿದ್ದಾರೆ ಎಂದು ತಿಳಿಸಿದರು.

Join Whatsapp
Exit mobile version