Home ಕರಾವಳಿ ಮಂಗಳೂರು: ಹೃದಯಾಘಾತದಿಂದ ಯುವಕ ಮೃತ್ಯು

ಮಂಗಳೂರು: ಹೃದಯಾಘಾತದಿಂದ ಯುವಕ ಮೃತ್ಯು

0

ಮಂಗಳೂರು: ಅಡ್ಯಾರ್ ಕಣ್ಣೂರು ಗಾಣದಬೆಟ್ಟು ನಿವಾಸಿ ಮುಹಮ್ಮದ್ ಹಾಶೀರ್ (32) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


ಇನ್ಫೋಸಿಸ್ ಉದ್ಯೋಗಿಯಾಗಿರುವ ಮುಹಮ್ಮದ್ ಹಾಶೀರ್ ಇಂದು ಬೆಳಿಗ್ಗೆ ಕೇರಳದ ವಯನಾಡ್ ನಲ್ಲಿ ಹೃದಯಾಘಾತದಿಂದ ನಿಧನರಾದರು.


ಮೃತರು ತಂದೆ, ತಾಯಿ, ಪತ್ನಿ, ಹಾಗೂ ಒಂದು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.


ಕರ್ನಾಟಕದಲ್ಲಿ ಹೃದಯಾಘಾತದಿಂದ ಯುವಕರು ಮೃತಪಡುತ್ತಿರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಕಳೆದ ಆರು ತಿಂಗಳಲ್ಲಿ 85 ಮಂದಿ ಹೃದಯಾಘಾತದಿಂದ ಬಲಿಯಾಗಿದ್ದಾರೆ. ಜನವರಿ 2025 ರಿಂದ ಜೂನ್ 2025 ರವರೆಗೆ ಜಿಲ್ಲೆಯಲ್ಲಿ 380 ಜನರಿಗೆ ಹೃದಯಾಘಾತವಾಗಿದ್ದು, ಇದರಲ್ಲಿ 85 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ 54 ಪುರುಷರು ಮತ್ತು 31 ಮಹಿಳೆಯರು ಸೇರಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version