Home ಕರಾವಳಿ ಮಂಗಳೂರು: ಸಿಟಿ ಗೋಲ್ಡ್ ನಲ್ಲಿ ಮೇ 20ರಿಂದ ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್

ಮಂಗಳೂರು: ಸಿಟಿ ಗೋಲ್ಡ್ ನಲ್ಲಿ ಮೇ 20ರಿಂದ ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್

ಮಂಗಳೂರು : ಕಂಕನಾಡಿ ಬೈಪಾಸ್ ರಸ್ತೆಯ ಬಳಿಯಲ್ಲಿರುವ ಸಿಟಿ ಗೋಲ್ಡ್ ಸಂಸ್ಥೆಯ ವತಿಯಿಂದ ಮೇ 20ರಿಂದ ಜೂನ್ 5ರವರೆಗೆ ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್ ನಡೆಯಲಿದೆ.

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪ್ರೈಡ್ ‘ಬ್ರೈಡ್ ಡೈಮಂಡ್ ಫೆಸ್ಟಿವಲ್’ ಉದ್ಘಾಟಿಸಲಿದ್ದು, ವೆಡ್ಡಿಂಗ್ ವಿಂಟೇಜ್ ಪ್ರೀಮಿಯಂ ಆಂಟಿಕ್ ಕಲೆಕ್ಷನ್‌ ನ್ನು ಬಿ ಹ್ಯೂಮನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಸೀಫ್ ಡೀಲ್ಸ್ ಉದ್ಘಾಟಿಸಲಿದ್ದಾರೆ.

ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್ ಪ್ರಯುಕ್ತ ‘ಆರ್ ಯು ದಿ ಡೈಮಂಡ್ ಸ್ಟಾರ್’ ಎಂಬ ಸ್ಪರ್ಧೆಯು ನಡೆಯಲಿದೆ. ಅದರ ಭಾಗವಾಗಿ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಗ್ರಾಹಕರು ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣಗಳನ್ನು ಉಚಿತವಾಗಿ ನಿರ್ವಹಣೆ ಮಾಡಿಕೊಡಲಾ ಗುವುದು. ಅಲ್ಲದೆ ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣವನ್ನು ನಮ್ಮಲ್ಲಿ ಬದಲಾಯಿಸಿ ಹೊಸ ವಜ್ರಾಭರಣವನ್ನು ಪಡೆದುಕೊಳ್ಳಬಹುದು. ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣಗಳ ಗುಣಮಟ್ಟ ವನ್ನು ಉಚಿತವಾಗಿ ತಪಾಸಣೆ ಮಾಡಿಕೊಡಲಾಗುವುದು. ಫೆಸ್ಟಿವಲ್ ಪ್ರಯುಕ್ತ ವಜ್ರಾಭರಣವನ್ನು ತಯಾರಿಸುವ ವಿನ್ಯಾಸಕಾರರು ಸಂಸ್ಥೆಯ ಮಳಿಗೆಯಲ್ಲಿ ಲಭ್ಯರಿರುತ್ತಾರೆ.

ಗ್ರಾಹಕರು ಸಿಟಿಗೋಲ್ಡ್ ಮಳಿಗೆಗೆ ಆಗಮಿಸಿ ವಜ್ರಾಭರಣವನ್ನು ಧರಿಸಿ ಸೆಲ್ಫಿ ತೆಗೆದು ಫೋಟೋವನ್ನು ತಮ್ಮ ಇನ್‌ಸ್ಟ್ರಾಗ್ರಾಮ್ ಅಥವಾ ಸ್ಟೇಟಸ್‌ ನಲ್ಲಿ ಹಾಕಿ ಸಿಟಿ ಗೋಲ್ಡ್ ಇನ್‌ ಸ್ಟ್ರಾಗ್ರಾಮ್ ಐಡಿಗೆ ಟ್ಯಾಗ್ ಮಾಡಬಹುದು. ಯಾವ ಗ್ರಾಹಕರಿಗೆ ಹೆಚ್ಚು ಲೈಕ್ ಸಿಗುತ್ತದೆಯೋ ಅಂತಹವರಿಗೆ ಸಿಟಿ ಗೋಲ್ಡ್ ವತಿಯಿಂದ ವಜ್ರಾಭರಣವನ್ನು ಬಹುಮಾನವಾಗಿ ನೀಡಲಾಗುವುದು.

ಫೆಸ್ಟಿವಲ್ ಪ್ರಯುಕ್ತ ಗ್ರಾಹಕರಿಗೆ ಖರೀದಿಯ ಮೇಲೆ ಹಲವಾರು ರಿಯಾಯಿತಿಯನ್ನು ಸಂಸ್ಥೆ ಪ್ರಕಟಿಸಿದೆ. ಅಂದರೆ ಡೈಮಂಡ್ ಖರೀದಿಯ ಮೇಲೆ ಪ್ರತಿಯೊಂದು ಕ್ಯಾರೆಟ್‌ ನಲ್ಲಿ 20 ಸಾವಿರ ರೂ. ಡಿಸ್ಕೌಂಟ್ ನೀಡಲಾಗುತ್ತದೆ. ಅನ್‌ಕಟ್ ಡೈಮಂಡ್ ಮೇಲೆ ಶೇ.30 ಡಿಸ್ಕೌಂಟ್ ನೀಡಲಾಗುತ್ತದೆ. ಪ್ರಿಸೆಸ್ ನೆಕ್ಲೆಸ್ ಮೇಲೆ ‘ನೋ ಮೇಕಿಂಗ್ ಚಾರ್ಜ್’ ಎಂಬ ವಿಶೇಷ ಕೊಡುಗೆಯನ್ನು ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Join Whatsapp
Exit mobile version