Home ಟಾಪ್ ಸುದ್ದಿಗಳು ಬಂಟ್ವಾಳ | ನಿಷೇಧವಿದ್ದರೂ ಹಳೆಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ

ಬಂಟ್ವಾಳ | ನಿಷೇಧವಿದ್ದರೂ ಹಳೆಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ

ಬಂಟ್ವಾಳ: ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಘನ ವಾಹನಗಳ ಸಂಚಾರಕ್ಕೆ ತಡೆ ಹಾಕಲಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ವಾಹನವೊಂದನ್ನು ಚಾಲಕ ಬಲಾತ್ಕಾರವಾಗಿ ನುಗ್ಗಿಸಿ ಸಿಲುಕಿಕೊಂಡ ಘಟನ ಇಂದು ಬೆಳಿಗ್ಗೆ ನಡೆದಿದೆ.

ಟೆಂಪೋವೊಂದು ಚಾಲಕನ ನಿರ್ಲಕ್ಷ್ಯ ತನದಿಂದ ಸೇತುವೆಯಲ್ಲಿ ತಲೆ ಮೇಲೆಯಾಗಿ ನಿಂತುಕೊಂಡಿದೆ.

ಬಿಸಿರೋಡಿನಿಂದ ಗೂಡಿನಬಳಿಯಾಗಿ ಪಾಣೆಮಂಗಳೂರು ಕಡೆಗೆ ಸಂಚಾರಕ್ಕೆ ಯತ್ನಿಸಿದಾಗ ಅದು ಸೇತುವೆಯ ಮೇಲೆ ಘನ ವಾಹನ ಸಂಚಾರ ಮಾಡದಂತೆ ಹಾಕಲಾದ ಕಬ್ಬಿಣದ ತಡೆಬೇಲಿಯಲ್ಲಿ ಸಿಲುಕಿಕೊಂಡಿದೆ. ಘಟನೆಯಿಂದ ಚಾಲಕ ಯಾವುದೇ ಗಾಯವಿಲ್ಲದೆ ಅಪಾಯವಿಲ್ಲದೆ ಪಾರಾಗಿದ್ದಾನೆ.

Join Whatsapp
Exit mobile version