Home ಕರಾವಳಿ ಮಂಗಳೂರು: ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪತಿ ಆತ್ಮಹತ್ಯೆ

ಮಂಗಳೂರು: ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪತಿ ಆತ್ಮಹತ್ಯೆ

ಮಂಗಳೂರು: ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೈದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿ ನಡೆದಿದೆ.


ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ(45) ಕೊಲೆಯಾದ ಮಹಿಳೆ ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ (55) ಆತ್ಮಹತ್ಯೆಗೈದವರು ಎಂದು ಗುರುತಿಸಲಾಗಿದೆ.


ಅನುಮಾನ ಸ್ವಭಾವದ ಶಿವಾನಂದ ತನ್ನ ಹೆಂಡತಿ ಶೋಭಾಳೊಂದಿಗೆ ಯಾವಾಗಲೂ ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಡುತ್ತಿದ್ದ. ಈತ ಆಕೆಯನ್ನು ಅನೈತಿಕ ಸಂಬಂಧ ಇದೆ ಎಂದು ಸಂಶಯ ಹೊಂದಿ ಕಂಡಕಂಡವರಿಗೆ ಕಟ್ಟುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಕೂಡ ಆಕೆಯೊಂದಿಗೆ ಮುಂಜಾನೆ ಜಗಳವಾಡಿದ್ದನ್ನು ಮಗ ಕಾರ್ತಿಕ್ ತಿಳಿಸಿದ್ದು, ಮಗ ಕೆಲಸಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮೃತರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ.

Join Whatsapp
Exit mobile version