ಕೇರಳ | ರಾಜ್ಯಪಾಲರ ಕೈಯಲ್ಲಿರುವ ವಿವಿಯ ಕುಲಾಧಿಪತಿ ಹುದ್ದೆಯನ್ನು ತೆಗೆಯಲು ಮುಂದಾದ ಸರ್ಕಾರ

Prasthutha|

ತಿರುವನಂತಪುರಂ: ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ವಜಾಗೊಳಿಸಲು ಕೇರಳ ಸರ್ಕಾರ ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿದೆ.

- Advertisement -

ಉಪಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಆರೀಫ್ ಖಾನ್ ಅವರು, ರಾಜ್ಯದ 11 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ತಮ್ಮ ನೇಮಕಾತಿಯನ್ನು ಅಸಿಂಧು ಎಂದು ಯಾಕೆ ಪರಿಗಣಿಸಬಾರದು ಎಂಬುದಕ್ಕೆ ವಿವರಣೆ ಕೇಳಿದ್ದರು.

ಇದೀಗ ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿರುವ ರಾಜ್ಯಪಾಲರನ್ನು ಬದಲಿಸಲು ಸರ್ಕಾರ ಸುಗ್ರೀವಾಜ್ಞೆಗೆ ಚಿಂತನೆ ನಡೆಸುತ್ತಿದೆ. ಈ ವಿಷಯದ ಬಗ್ಗೆ ವಿವಿಧ ಹಂತಗಳಲ್ಲಿ ಚರ್ಚೆ ನಡೆಯುತ್ತಿವೆ ಮತ್ತು ಕಾನೂನು ಇಲಾಖೆ ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

- Advertisement -

ಮುಖ್ಯಮಂತ್ರಿಯನ್ನು ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿಯನ್ನಾಗಿ ಮಾಡಲು ಜೂನ್’ನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಅಂಗೀಕರಿಸಿದ ಮಸೂದೆಯನ್ನು ಕೇರಳ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಹಿಂದೆ ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೂಡ ಇದೇ ಮಾರ್ಗವನ್ನು ಅಳವಡಿಸಿಕೊಂಡಿದೆ. ಪಂಜಾಬ್’ನ ಆಮ್ ಆದ್ಮಿ ಸರ್ಕಾರವು ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಾಧಿಪತಿಯನ್ನಾಗಿರುವ ರಾಜ್ಯಪಾಲರನ್ನು ಬದಲಾಯಿಸುವ ಮಸೂದೆಯನ್ನು ಪರಿಗಣಿಸುತ್ತಿದೆ ಎಂಬ ವರದಿಗಳೂ ಇವೆ.

Join Whatsapp
Exit mobile version