Home ಕರಾವಳಿ ಮಂಗಳೂರಿನ ಪ್ರತಿಷ್ಠಿತ ಸರಕಾರಿ ವಿದ್ಯಾ ಸಂಸ್ಥೆಗೆ ಹರಿದ ಧ್ವಜ ಕಳುಹಿಸಿದ ಜಿಲ್ಲಾಡಳಿತ !

ಮಂಗಳೂರಿನ ಪ್ರತಿಷ್ಠಿತ ಸರಕಾರಿ ವಿದ್ಯಾ ಸಂಸ್ಥೆಗೆ ಹರಿದ ಧ್ವಜ ಕಳುಹಿಸಿದ ಜಿಲ್ಲಾಡಳಿತ !

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸರಕಾರಿ ವಿದ್ಯಾ ಸಂಸ್ಥೆಯೊಂದಕ್ಕೆ ಸರಕಾರ, ಹರಿದ ರಾಷ್ಟ್ರಧ್ವಜವನ್ನು ಕಳುಹಿಸಲಾಗಿದ್ದು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ತಯಾರಾದ ಪಾಲಿಸ್ಟರ್ ಧ್ವಜ ಇದಾಗಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.

 ಸರ್ಕಾರಿ ವಿದ್ಯಾ ಸಂಸ್ಥೆಗೆ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇದನ್ನು ಕಳುಹಿಸಲಾಗಿದೆ.

ಈ ಧ್ವಜದ ಒಂದು ಭಾಗ ಹರಿದುಹೋಗಿದ್ದು, ಇದನ್ನು ನಾವು ಹಾರಿಸುವುದಾದರೂ ಹೇಗೆ? ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಪ್ರಶ್ನಿಸಿದ್ದಾರೆ.

ಪ್ರಚಾರಕ್ಕಾಗಿ ಸರ್ಕಾರ ರಾಷ್ಟ್ರಧ್ವಜದ ಗೌರವ ಹರಾಜಿಗಿಟ್ಟಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಈ ಧ್ವಜದಲ್ಲಿ ಅಶೋಕ ಚಕ್ರ ಒಂದು ಬದಿಗೆ ಸರಿದಿದ್ದು, ಇದು ಧ್ವಜ ಸಂಹಿತೆಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ.

Join Whatsapp
Exit mobile version