ಮಂಗಲ್ಪಾಡಿ: ದುರಾಡಳಿತ, ಸ್ವಜನ ಪಕ್ಷಪಾತ ಮತ್ತು ಹಗರಣಗಳಲ್ಲಿಯೇ ಮುಳುಗಿದ ಮಂಗಲ್ಪಾಡಿ ಪಂಚಾಯತ್ ಅಧಿಕಾರಿಗಳು, ಜನ ಪ್ರತಿನಿಧಿಗಳು ಗ್ರಾಮದ ಜನತೆಯ ಹಿತಾಸಕ್ತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಗಳು ಸೂಕ್ತ ವಿಲೇವಾರಿ ನಡೆಸದ ಕಾರಣದಿಂದ ರಾಶಿ ಬಿದ್ದು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದ್ದರೂ ಪಂಚಾಯತ್ ಆಡಳಿತ ಸಮಿತಿ ಮತ್ತು ಅಧಿಕಾರಿಗಳು ತಮಗೆ ಸಂಬಂಧಪಟ್ಟ ವಿಷಯವಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಸೂಕ್ತ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಸ್.ಡಿ.ಪಿ.ಐ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಎಚ್ಚರಿಸಿದ್ದಾರೆ.
ಅವ್ಯವಸ್ಥೆಯ ಆಗರವಾದ ಮಂಗಲ್ಪಾಡಿ ಪಂಚಾಯತ್ ಗೆ ಎಸ್.ಡಿ.ಪಿ.ಐ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಯೋಜಿಸಿದ ಮಾರ್ಚ್ ನಲ್ಲಿ ಅವರು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಚೇರ್ಮಾನ್ ಹಮೀದ್, ಹೊಸಂಗಡಿಯು ಹಗರಣಗಳ ಸಂಪೂರ್ಣ ಮಾಹಿತಿಯನ್ನು ವಿಜಿಲೆನ್ಸ್ ಗೆ ನೀಡಲಿದ್ದೇವೆ ಎಂದು ತಿಳಿಸಿದರು.
ಸಭೆಯನ್ನುದ್ದೇಶಿಸಿ ಪಕ್ಷದ ಮಂಗಲ್ಪಾಡಿ ಪಂಚಾಯತ್ ಸಮಿತಿ ಸದಸ್ಯರಾದ ಸಲೀಂ ಬೈದಲ, ಎಸ್.ಡಿ.ಪಿ.ಐ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷರಾದ ಇಂತಿಯಾಝ್ ಉಪ್ಪಳ, ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು…