Home ಗಲ್ಫ್ ಸೋಶಿಯಲ್ ಫೋರಮ್ ಕಪ್ ಎಟಿಎಸ್ ಮಡಿಲಿಗೆ

ಸೋಶಿಯಲ್ ಫೋರಮ್ ಕಪ್ ಎಟಿಎಸ್ ಮಡಿಲಿಗೆ

ಜಿದ್ದಾ: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ಜಿದ್ದಾ ಆಶ್ರಯದಲ್ಲಿ ಮತ್ತು ಮಂಗಳೂರು ಕ್ರಿಕೆಟ್ ಅಸೋಶಿಯಷನ್ ಇದರ ಸಹಭಾಗಿತ್ವದಲ್ಲಿ “ಸೋಶಿಯಲ್ ಫೋರಮ್ ಕಪ್  2022” ಜೆದ್ದಾದ ಜೆ ಟಿ ಪಿ ಎಲ್ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿಯನ್ ಫ್ರೆಟೆರ್ನಿಟಿ ಫೋರಮ್ ಪಶ್ಚಿಮ ವಲಯ ಅಧ್ಯಕ್ಷ ಫಯಾಝ್ ಚೆನ್ನೈ, ಜೆದ್ದಾ ಉದ್ಯಮಿ ಕಮರ್ ಸಾದಾ, ಭಟ್ಕಳ್ ಕಮ್ಯೂನಿಟಿ ಅಧ್ಯಕ್ಷ ಅಬ್ದುಲ್ ಸಲಾಂ, ಜಝಿರಾ ಏರ್ ವೇಸ್ ರಿಜನಲ್ ಮೆನೇಜರ್ ಒಸ್ಸಾಮ್ ಶಭಾನ್, ಪೆಟ್ರೋನ್ಸ್ ಕಂಪನಿಯ ಮಾರ್ಕೆಟಿಂಗ್ ಹೆಡ್ ಆಸಿಂ ಝೀಷನ್, ದೀಬ್ ಮುಹಮ್ಮದ್, ಮೊಯಿದಿನ್ ತಮಿಳುನಾಡು, ಬೀರಾನ್ ಕುಟ್ಟಿ ಕೇರಳ, ಸಮಾಜ ಸೇವಕ ಇಕ್ಬಾಲ್ ಮಿರ್ಜಾ, ಶಂಸುದ್ದಿನ್ ಬಂಟ್ವಾಳ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ಜಿದ್ದಾ ಅಧ್ಯಕ್ಷ ಆಸೀಫ್ ಗಂಜಮಠ   ವಹಿಸಿದ್ದರು.

   ಈ ಪಂದ್ಯಕೂಟದಲ್ಲಿ ಸುಮಾರು ಎಂಟು ತಂಡಗಳು ಭಾಗವಹಿಸಿದ್ದವು. ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಿತು. ಫೈನಲ್ ಗೆ ಎ ಟಿ ಎಸ್ ತಂಡ ಹಾಗೂ ಎಂ ಸಿ ಸಿ ತಂಡ ಪ್ರವೇಶಿಸಿ, ಫೈನಲ್ ನಲ್ಲಿ ಎಂ ಸಿ ಸಿ ತಂಡವನ್ನು ಸೋಲಿಸಿ ಎ ಟಿ ಎಸ್ ತಂಡ ಸೋಶಿಯಲ್ ಫೋರಮ್ ಟ್ರೋಫಿ ತನ್ನದಾಗಿಸಿತು. ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಎಂ ಸಿ ಸಿ ತಂಡದ ಆಟಗಾರ ಅಶ್ರಫ್ ಬೊಳ್ಳೂರು ಉತ್ತಮ ದಾಂಡಿಗ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಜತೆಗೆ ಜಝಿರಾ ಏರ್ ವೇಸ್ ಪ್ರಯೋಕತ್ವದ ಭಾರತಕ್ಕೆ ಪ್ರಯಾಣ ಮಾಡಲಿರುವ ವಿಮಾನ ಟಿಕೆಟ್ ತನ್ನದಾಗಿಸಿದರು.

ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಎ ಟಿ ಎಸ್ ತಂಡದ ಫವಾಜ್ ಉಳ್ಳಾಲ ಪಡೆದರು. ಪಂದ್ಯಾಟದ ವೀಕ್ಷಕರಿಗಿದ್ದ ಅದೃಷ್ಟದ ರಫೆಲ್ ಡ್ರಾ ದಲ್ಲಿ ಅಬ್ದುಲ್ ಸಲಾಂ ವಿಜೇತರಾಗಿ ಭಾರತಕ್ಕಿರುವ ಟಿಕೆಟ್ ಗಳಿಸಿದರು.

ಪೆಟ್ರೋನೆಸ್ ಕಂಪನಿಯ ಪ್ರಯೋಜಕತ್ವದಲ್ಲಿ ಪ್ರೇಕ್ಷಕರಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಈ ರಸಪ್ರಶ್ನೆ ಸ್ಪರ್ಧೆಯನ್ನು ಪೆಟ್ರೋನೆಸ್ ಕಂಪನಿಯ ಹೆಡ್ ಮಾರ್ಕೆಟಿಂಗ್ ಮ್ಯಾನೇಜರ್ ಆಸಿಂ ಜೀಷನ್ ನಡೆಸಿಕೊಟ್ಟರು. ಕ್ರೀಡಾ ಕೂಟದ ಅಂಗವಾಗಿ ಪುಟ್ಟ ಮಕ್ಕಳಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳು  ಪ್ರೇಕ್ಷಕರ ಮನ ತಣಿಸುವಂತಿತ್ತು.

Join Whatsapp
Exit mobile version