Home ಕರಾವಳಿ ಮಂಗಳೂರು ದಸರಾ; ಶಾರದಾ ಮೂರ್ತಿಗೆ ಉಡಿಸಲು ಸೀರೆ ಸಿದ್ದಪಡಿಸುತ್ತಿರುವ ಮುಸ್ಲಿಂ ಕುಟುಂಬ

ಮಂಗಳೂರು ದಸರಾ; ಶಾರದಾ ಮೂರ್ತಿಗೆ ಉಡಿಸಲು ಸೀರೆ ಸಿದ್ದಪಡಿಸುತ್ತಿರುವ ಮುಸ್ಲಿಂ ಕುಟುಂಬ

ಮಂಗಳೂರು: ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದಲ್ಲಿ ನಡೆಯುವ ಶಾರದಾ ಮಹೋತ್ಸವದಂದು ಶಾರದಾ ಮೂರ್ತಿಗೆ ಉಡಿಸುವ ಚಿನ್ನದ ಜರಿಯ ಬನಾರಸ್ ಸೀರೆಯನ್ನು ವಾರಾಣಸಿಯ ಮುಸ್ಲಿಂ ಕುಟುಂಬವೊಂದು ಸಿದ್ದಪಡಿಸುತ್ತದೆ ಎಂದು ತಿಳಿದು ಬಂದಿದೆ.


ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸುವ ಶಾರದೆಗೆ ಬೆಳ್ಳಿ ಜರಿಯಂಚಿನ ಕೈಮಗ್ಗದ ಬನಾರಸ್ ಸೀರೆ ತೊಡಿಸುವ ಪದ್ಧತಿ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದ್ದು, ಇದಕ್ಕೆ ಅಂದಾಜು ಎರಡು‌ ಲಕ್ಷ ವೆಚ್ಚ ತಗಲುತ್ತದೆ.


ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿ ಉತ್ಸವ ಜರುಗಲಿದೆ. 1922ರಲ್ಲಿ ಪ್ರಾರಂಭವಾದ ಉತ್ಸವಕ್ಕೆ ಈ ಬಾರಿ 100 ವರ್ಷ ತುಂಬಿದ ಪ್ರಯುಕ್ತ ಸುಮಾರು 8 ಲಕ್ಷ ಮೌಲ್ಯದ ಬಂಗಾರದ ಝರಿಯ ಸೀರೆಯಿಂದ ಶಾರದಾ ವಿಗ್ರಹವನ್ನು ಅಲಂಕರಿಸಲು ಸಮಿತಿ ಮುಂದಾಗಿದೆ.


ಈ ಬಾರಿಯೂ ಮಂಗಳೂರಿನ ಕುಲ್ಯಾಡಿಕಾರ್ ಸಿಲ್ಕ್ಸ್ ನವರೇ ಈ ವೆಚ್ಚದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ತಲೆಮಾರುಗಳಿಂದಲೂ ನೇಕಾರಿಕೆಯಲ್ಲಿ ಪರಿಣತಿ ಹೊಂದಿರುವ ವಾರಾಣಸಿಯ ಮುಸ್ಲಿಂ ಕುಟುಂಬವೊಂದು ಈ ಸೀರೆಯನ್ನು ಸಿದ್ಧಪಡಿಸುತ್ತಿದೆ. ಸೀರೆಯ ಕಸೂತಿಯನ್ನು ಪ್ರತಿವರ್ಷ ಇವರಿಂದಲೇ ಮಾಡಿಸಲಾಗುತ್ತದೆ.

Join Whatsapp
Exit mobile version