ಮಂಗಳೂರು: ಮಂಗಳೂರು ನಗರ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ತ್ರಿಶೂಲ ದೀಕ್ಷೆ ಮಾಡಿರುವ ಮಾಹಿತಿ ದೊರೆತಿದೆ. ಪರಿಶೀಲನೆ ಮಾಡಿದಾಗ ಪ್ರತಿ ವರ್ಷವೂ ತ್ರಿಶೂಲ ದೀಕ್ಷೆ ಮಾಡಿರುವುದು ಗೊತ್ತಾಗಿದೆ. ಸಾಂಕೇತಿಕವಾಗಿ ಕೊಟ್ಟಿದ್ದೇವೆ, ಇದನ್ನು ಪ್ರತಿ ವರ್ಷ ಆಚರಿಸುತ್ತಾ ಬಂದಿದ್ದೇವೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ. ಆದರೂ ಕಾನೂನು ಪ್ರಕಾರ ತಪ್ಪಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಬದಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಕುಟುಂಬ ದೂರು ನೀಡಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದರೂ ಅನಾರೋಗ್ಯ ಪೀಡಿತ ಗಂಡು ಮಗುವನ್ನು ತಮಗೆ ನೀಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಡಿಎನ್ ಎ ಸೇರಿದಂತೆ ಇತರ ಪರೀಕ್ಷೆ, ದಾಖಲೆ ಪರಿಶೀಲಿಸಿ ಮಗು ಬದಲಾಯಿಸಿರುವುದು ಸತ್ಯ ಎಂದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.