Home ಟಾಪ್ ಸುದ್ದಿಗಳು ಪತ್ನಿಯನ್ನು ರೈಲ್ವೆ ಹಳಿಗೆ ತಳ್ಳಿ ಹಾಕಿ ಮಕ್ಕಳೊಂದಿಗೆ ಪತಿ ಎಸ್ಕೇಪ್

ಪತ್ನಿಯನ್ನು ರೈಲ್ವೆ ಹಳಿಗೆ ತಳ್ಳಿ ಹಾಕಿ ಮಕ್ಕಳೊಂದಿಗೆ ಪತಿ ಎಸ್ಕೇಪ್

ಮುಂಬೈ: ಪತ್ನಿಯನ್ನು ಎಳೆದುಕೊಂಡು ಹೋಗಿ ರೈಲು ಬರುತ್ತಿದ್ದಾಗ ಹಳಿಗೆ ತಳ್ಳಿ ಹತ್ಯೆಗೈದು, ಇಬ್ಬರು ಮಕ್ಕಳೊಂದಿಗೆ ಪತಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಈ ವೀಡಿಯೋ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಪ್ಲಾಟ್ಫಾ್ರ್ಮ್ ಬೆಂಚ್‌ನಲ್ಲಿ ಮಲಗಿದ್ದ ಮಹಿಳೆಯನ್ನು ಪತಿ ಎಬ್ಬಿಸಿದ್ದಾನೆ. ನಂತರ ಕೆಲವು ಸೆಕೆಂಡುಗಳ ಕಾಲ ಇಬ್ಬರು ಮಾತನಾಡುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಮಹಿಳೆಯನ್ನು ಹಳಿಗಳ ಕಡೆಗೆ ಎಳೆದುಕೊಂಡು ಹೋಗಿ ರೈಲು ಬರುತ್ತಿದ್ದಂತೆ ಅವಳನ್ನು ಏಕಾಏಕಿ ತಳ್ಳಿದ್ದಾನೆ. ಬಳಿಕ ಪಕ್ಕದಲ್ಲಿಯೇ ಮಲಗಿದ್ದ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಓಡಿ ಹೋಗಿದ್ದಾನೆ.

Join Whatsapp
Exit mobile version