Home ಟಾಪ್ ಸುದ್ದಿಗಳು ಹತ್ರಾಸ್ ಘಟನೆ: ಮುಹಮ್ಮದ್ ಆಲಮ್‌ಗೆ ಜಾಮೀನು

ಹತ್ರಾಸ್ ಘಟನೆ: ಮುಹಮ್ಮದ್ ಆಲಮ್‌ಗೆ ಜಾಮೀನು

ಅಲಹಾಬಾದ್: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ, ಕಾರು ಚಾಲಕ ಮುಹಮ್ಮದ್ ಆಲಮ್ ಅವರಿಗೆ ಅಲಹಾಬಾದ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಅದೇಶ ನೀಡಿದೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದು, ಅವರಿಗೆ ನೆರವಾದ ಅರೋಪದಲ್ಲಿ ಕಾರು ಚಾಲಕ ಮುಹಮ್ಮದ್ ಆಲಮ್ ವಿರುದ್ಧ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಆರೋಪಿಗಳ ವಕೀಲ ಅಡ್ವಕೇಟ್ ಸೈಫಾನ್ ತಿಳಿಸಿದ್ದಾರೆ.

ಇದರೊಂದಿಗೆ ಈ ಪ್ರಕರಣದಲ್ಲಿ ಪ್ರಥಮ ಜಾಮೀನು ದೊರೆತಂತಾಗಿದ್ದು, ಇನ್ನೂ ಆನೇಕರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಅಲ್ಲದೆ, ಪ್ರಮುಖ ಆರೋಪಿ ಸಿದ್ದೀಕ್ ಕಾಪ್ಪನ್ ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ತಳ್ಳಿಹಾಕಲಾಗಿತ್ತು

Join Whatsapp
Exit mobile version