Home ಟಾಪ್ ಸುದ್ದಿಗಳು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ಥಳಿಸಿದ ಪತಿ ಅರೆಸ್ಟ್

ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ಥಳಿಸಿದ ಪತಿ ಅರೆಸ್ಟ್

ತಿರುವನಂತಪುರಂ: ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ಕೆಲಸ ಬಿಡಲು ನಿರಾಕರಿಸಿದ ತನ್ನ ಪತ್ನಿಯನ್ನು ಥಳಿಸಿ, ಅದನ್ನು ಚಿತ್ರೀಕರಿಸಿದ 27 ವರ್ಷದ ವ್ಯಕ್ತಿಯನ್ನು ಮಲಯಿಂಕೀಜು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತಿರುವನಂತಪುರಂನ ನಿವಾಸಿ ದಿಲೀಪ್ (27) ಎಂಬಾತ ಚಿತ್ರೀಕರಿಸಿದ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದಿಲೀಪ್ ತನ್ನ ಇಚ್ಛೆಗೆ ವಿರುದ್ಧವಾಗಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡಲು ಹೋಗಿದ್ದಕ್ಕಾಗಿ ತನ್ನ ಹೆಂಡತಿಯನ್ನು ಥಳಿಸಿದ್ದಾನೆ ಎಂದು ವರದಿಯಾಗಿದೆ.

ದಿಲೀಪ್ ಅವರ ಪತ್ನಿ ನೀಡಿದ ದೂರಿನ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕ್ರಮ ಕೈಗೊಂಡ ಮಲಯಾಂಕೀಜು ಪೊಲೀಸರು ಕೊಲೆಯತ್ನ ಮತ್ತು ಇತರ ಹಲವಾರು ಆರೋಪಗಳ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Join Whatsapp
Exit mobile version