Home ಟಾಪ್ ಸುದ್ದಿಗಳು ಕುಂಕುಮ ವಿಚಾರ:  ಸೋನಿಯಾ ಗಾಂಧೀಯನ್ನು ಕಿಚಾಯಿಸಿದ ಸಿಟಿ ರವಿ

ಕುಂಕುಮ ವಿಚಾರ:  ಸೋನಿಯಾ ಗಾಂಧೀಯನ್ನು ಕಿಚಾಯಿಸಿದ ಸಿಟಿ ರವಿ

►ಶಾಸಕರ ಹೆಂಡತಿಯ ಫೋಟೋ ಹಂಚಿ ಕುಂಕುಮ ಎಲ್ಲಿ ಎಂದು ಪ್ರಶ್ನಿಸಿದ ನೆಟ್ಟಿಗರು

ಬೆಂಗಳೂರು: ನಮ್ಮ ಕಡೆ ಮದುವೆಯಲ್ಲಾದರೂ ಅರಿಶಿನ ಕುಂಕುಮ ಇಡ್ತಾರೆ. ಆದರೆ ರಾಹುಲ್ ಗಾಂಧಿ ಅವರ ಅಮ್ಮ ಮದುವೆಯಲ್ಲೂ ಹಣೆಗೆ ಕುಂಕುಮ ಇಟ್ಟಿದ್ರೋ ಇಲ್ಲವೋ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೋನಿಯಾ ಗಾಂಧೀ ಕುರಿತು ವ್ಯಂಗ್ಯವಾಡಿದ್ದು, ಇದಕ್ಕೆ ನೆಟ್ಟಿಗರು ತಿರುಗೇಟು ಕೊಟ್ಟಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತಾಡಿದ ಸಿ.ಟಿ ರವಿ, ನೆಹರೂ, ಸೋನಿಯಾ ಗಾಂಧೀ ಮತ್ತು ರಾಹುಲ್ ಗಾಂಧೀ ಕುರಿತಂತೆ ನಿಂದನಾತ್ಮಕವಾದ  ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಸೋನಿಯಾ ಗಾಂಧೀ ಕುಂಕುಮದ ಕುರಿತು ತಗಾದೆ ಎತ್ತಿದ ಸಿ.ಟಿ ರವಿ, ಕುಂಕುಮ ಕಂಡ್ರೆ ಹೆದರುವವರು, ಎಲೆಕ್ಷನ್ ಬಂದಾಗ ಹಣೆ ತುಂಬ ಬೊಟ್ಟು ಇಡ್ತಾರೆ ಎಂದು ಕುಟುಕಿದ್ದರು.

ಇದಕ್ಕೆ ತಿರುಗೇಟು ನೀಡಿದ ನೆಟ್ಟಿಗರು ಸಂಸದರ ಹೆಂಡತಿಯ ಹಲವು ಚಿತ್ರವನ್ನು ಹಂಚಿಕೊಂಡು ಯಾರಿಗಾದರೂ ಸಿ.ಟಿ ರವಿ ಹೆಂಡತಿ ಹಣೆಯಲ್ಲಿ ಕುಂಕುಮ ಕಾಣ್ಸುತ್ತಾ ಎಂದು ಪ್ರಶ್ನಿಸಿದ್ದಾರೆ. ಧರ್ಮಪತ್ನಿಗೆ ಸ್ವದೇಶೀ ಬಟ್ಟೆ ಹಾಕಿಸೋಕೆ ಯೋಗ್ಯತೆ ಇಲ್ಲದವರು ಬೇರೆಯವರ ಬಗ್ಗೆ ಮಾತಾಡುತ್ತಾರೆ. ಹೇಳೋದು ಭಾರತೀಯ ಸಂಸ್ಕ್ರತಿ, ಆಚರಿಸೋದು ವಿದೇಶಿ ಸಂಸ್ಕ್ರತಿ ಎಂದು ಟಕ್ಕರ್ ಕೊಟ್ಟಿದ್ದಾರೆ.

https://twitter.com/Adv_Poojary/status/1582648011477635073?t=NQ3vcBeP1IDriqUrd5qhog&s=08
Join Whatsapp
Exit mobile version