Home ಟಾಪ್ ಸುದ್ದಿಗಳು ಬೆಂಗಳೂರಿನಿಂದ ನಾಪತ್ತೆಯಾದ 14 ರ ಬಾಲಕಿ ಗೋವಾದಲ್ಲಿ ಪತ್ತೆ

ಬೆಂಗಳೂರಿನಿಂದ ನಾಪತ್ತೆಯಾದ 14 ರ ಬಾಲಕಿ ಗೋವಾದಲ್ಲಿ ಪತ್ತೆ

ಬೆಂಗಳೂರು: ಕಡಿಮೆ ಅಂಕ ತೆಗೆದಿದ್ದಕ್ಕೆ ಪೋಷಕರು ಬೈದರೆಂದು ಮನೆಬಿಟ್ಟು ನಾಪತ್ತೆಯಾಗಿದ್ದ ನಗರದ ನಂದಿನಿ ಲೇಔಟ್ ಬಾಲಕಿಯು ಗೋವಾದಲ್ಲಿ ಪತ್ತೆಯಾಗಿದ್ದಾಳೆ

ಮಂಗಳವಾರ ಸಂಜೆ ಮನೆಯಿಂದ ಟ್ಯೂಷನ್ ಗೆ ತೆರಳಿದ್ದ 14 ವರ್ಷ ಪ್ರಾಯದ ಭಾರ್ಗವಿ ನಂತರ ಟ್ಯೂಷನ್ ಮುಗಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಮೆಜೆಸ್ಟಿಕ್ ನಿಂದ ಮಂಗಳೂರು ಬಸ್ ಹತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಬಾಲಕಿ ಆಟೋವನ್ನು ತೆಗೆದುಕೊಂಡು ಮುಕ್ಕಾ ಬೀಚ್ ಗೆ ಮುಂಜಾನೆ 3 ಗಂಟೆ ಸುಮಾರಿಗೆ ಹೋಗುತ್ತಿರುವುದು ಕಂಡುಬಂದಿದೆ. ನಂತರ ಸಂಜೆ 6 ಗಂಟೆ ಸುಮಾರಿಗೆ ಅವಳು ಬಸ್ ನಿಲ್ದಾಣಕ್ಕೆ ಮರಳಿದ್ದಳು.

ಬೆಂಗಳೂರು ಪೊಲೀಸರ ತಂಡವು ಮಂಗಳೂರು ಮತ್ತು ಧರ್ಮಸ್ಥಳಕ್ಕೆ ಆಗಮಿಸಿತ್ತು, ಕಾಣೆಯಾದ ಬಾಲಕಿಯ ಸುದ್ದಿ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆಗಿದ್ದು, ಇದೀಗ ಆಕೆಯನ್ನು ಗೋವಾದಲ್ಲಿ ಪತ್ತೆಹಚ್ಚಲಾಗಿದೆ.

Join Whatsapp
Exit mobile version