Home ಟಾಪ್ ಸುದ್ದಿಗಳು ಬಿಜೆಪಿ ಅಕ್ರಮ ಕಟ್ಟಡ ಎಂದ ಮರುಕ್ಷಣವೇ ಅದನ್ನು ಒಡೆದು ಹಾಕಿದ ಠಾಕ್ರೆ ಅನುಯಾಯಿ

ಬಿಜೆಪಿ ಅಕ್ರಮ ಕಟ್ಟಡ ಎಂದ ಮರುಕ್ಷಣವೇ ಅದನ್ನು ಒಡೆದು ಹಾಕಿದ ಠಾಕ್ರೆ ಅನುಯಾಯಿ

ಮುಂಬೈ: ಅಕ್ರಮ ಕಟ್ಟಡ ಎಂದು ಬಿಜೆಪಿ ನಾಯಕರು ಆರೋಪಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಆಪ್ತ ಸಹಾಯಕ ಮಿಲಿಂದ್ ನಾರ್ವೇಕರ್ ಅವರು ತಮ್ಮ ಕಟ್ಟಡವನ್ನು ಕೆಡವಿ ಹಾಕಿದ್ದಾರೆ.


ಕರಾವಳಿ ಕಾನೂನು ಉಲ್ಲಂಘಿಸಿದ ಅಕ್ರಮ ಕಟ್ಟಡ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ರತ್ನಗಿರಿ ಜಿಲ್ಲೆಯ ಮುರುಡ್ ನಲ್ಲಿ ಕಡಲಿಗೆ ಮುಖ ಮಾಡಿ ಈ ಬಂಗಲೆ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಮೊದಲು ಬಿಜೆಪಿಯ ಕೀರಿತ್ ಸೋಮಯ್ಯ ಅವರು ಕಡಲ ಕರೆಗಳಲ್ಲಿ ಹಲವರು ಅಕ್ರಮ ಕಟ್ಟಡ ಕಟ್ಟಿಕೊಂಡಿದ್ದಾರೆ ಎಂದು ಪರಿಸರ ಇಲಾಖೆಗೆ ಪತ್ರ ಬರೆದಿದ್ದರು.


ಮುಂಬಯಿ ನಗರದಲ್ಲಿ ಕಂಗನಾ ರನೌತ್ ಮೊದಲಾದವರ ಕಟ್ಟಡಗಳನ್ನು ಇಂಥ ಕಾರಣಕ್ಕಾಗಿ ಧ್ವಂಸಗೊಳಿಸಲಾಗಿತ್ತು.

Join Whatsapp
Exit mobile version