Home ಟಾಪ್ ಸುದ್ದಿಗಳು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ ತಾಲಿಬಾನ್

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ ತಾಲಿಬಾನ್

ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಅಝೀಝ್ ಉಲ್ಲಾ ಫಝ್ಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.

ತನ್ನ ಅಧಿಕೃತ ಹೇಳಿಕೆಯಲ್ಲಿ ತಾಲಿಬಾನ್ ಮಾಧ್ಯಮದ ಮೂಲಕ ಈ ಸುದ್ದಿಯನ್ನು ಬಹಿರಂಗ ಪಡಿಸಿದೆ.

ತಾಲಿಬಾನ್ ಬಂಡುಕೋರರು ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು. ನಂತರದ ಬೆಳವಣಿಗೆ ಜಾಗತಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ತಾಲಿಬಾನ್, ಇಂದು ಅಫ್ಘಾನ್ ಕ್ರಿಕೆಟ್ ಮಂಡಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದೆ.

ತಾಲಿಬಾನ್ ಬಂಡುಕೋರರು ಕ್ರಿಕೆಟ್ ಸೇರಿದಂತೆ ಮನರಂಜನೆಗೆ ವ್ಯಾಪಕ ವ್ಯಕ್ತಪಡಿಸುತ್ತಾರೆಂಬ ಪಾಶ್ಚಿಮಾತ್ಯದ ನಿರಂತರ ಅಪಪ್ರಚಾರದ ನಡುವೆ ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Join Whatsapp
Exit mobile version