Home ಟಾಪ್ ಸುದ್ದಿಗಳು ಮಹಂತ್ ನರೇಂದ್ರ ಗಿರಿ ಸಂಶಯಾಸ್ಪದ ಸಾವು: ಆರೋಪಿಗಳ ಮಂಪರು ಪರೀಕ್ಷೆಗೆ ಸಿಬಿಐ ಮನವಿ

ಮಹಂತ್ ನರೇಂದ್ರ ಗಿರಿ ಸಂಶಯಾಸ್ಪದ ಸಾವು: ಆರೋಪಿಗಳ ಮಂಪರು ಪರೀಕ್ಷೆಗೆ ಸಿಬಿಐ ಮನವಿ

ಪ್ರಯಾಗ್ ರಾಜ್: ಅಖಿಲ ಭಾರತೀಯ ಅಖಾರಿ ಪರಿಷತ್ -ಎಬಿಎಪಿ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪಾಲಿಗ್ರಾಫ್ ಪರೀಕ್ಷೆ (ಮಂಪರು ಪರೀಕ್ಷೆ) ನಡೆಸಲು ಅನುಮತಿ ಕೋರಿ ಕೇಂದ್ರ ತನಿಖಾ ದಳ –ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಪ್ರಸ್ತುತ ಅಕ್ಟೋಬರ್ 18 ರ ವರೆಗೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಆನಂದ್ ಗಿರಿ, ಅಧ್ಯಾ ಪ್ರಸಾದ್ ತಿವಾರಿ ಮತ್ತು ಸಂದೀಪ್ ತಿವಾರಿ ಅವರನ್ನು ನೈನಿ ಕೇಂದ್ರ ಜೈಲಿನಲ್ಲಿಡಲಾಗಿದೆ. ಮೇಲಿನ ಎಲ್ಲಾ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿರುವಾಗ ನೈಜ್ಯ ಸಂಗತಿಗಳನ್ನು ಬಹಿರಂಗಪಡಿಸಲು ಸಹಕರಿಸುತಿಲ್ಲ.

ಮಹಂತಿ ನರೇಂದ್ರ ಗಿರಿ ಸಾವಿನ ರಹಸ್ಯವನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಮೂವರು ಆರೋಪಿಗಳಿಗೆ ಮಂಪರು ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ತಿಳಿಸಿದೆ.

ಭಾರತದ ಬೃಹತ್ ಸಂಘಟನೆಯಾದ ಅಖಾರಿ ಪರಿಷತ್ ನ ಅಧ್ಯಕ್ಷರಾದ ಮಹಂತ್ ಗಿರಿ ಅವರ ಮೃತದೇಹ ಸೆಪ್ಟೆಂಬರ್ 20 ರಂದು ಪ್ರಯಾಗ್ ರಾಜ್ ಮಠದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಸ್ಥಳದಲ್ಲಿ ಸಿಕ್ಕದ್ದ ಆತ್ಮಹತ್ಯಾ ಪತ್ರದಲ್ಲಿ ಶಿಷ್ಯರಾದ ಆನಂದ್ ಗಿರಿ ಮತ್ತು ಇನ್ನಿಬ್ಬರ ಹೆಸರನ್ನು ಉಲ್ಲೇಖಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸೆಪ್ಟೆಂಬರ್ 23 ರಂದು ಸಿಬಿಐ ಗೆ ವರ್ಗಾಯಿಸಲಾಯಿತ್ತು.

Join Whatsapp
Exit mobile version