Home ಟಾಪ್ ಸುದ್ದಿಗಳು ಮಾದಕ ವಸ್ತಗಳ ವಿರುದ್ಧ ಮಾತನಾಡಿದ ಮದ್ರಸಾ ಅಧ್ಯಾಪಕನಿಗೆ ಹಲ್ಲೆ

ಮಾದಕ ವಸ್ತಗಳ ವಿರುದ್ಧ ಮಾತನಾಡಿದ ಮದ್ರಸಾ ಅಧ್ಯಾಪಕನಿಗೆ ಹಲ್ಲೆ

ಮಲಪ್ಪುರಂ: ಮದ್ರಸಾ ಪಠ್ಯಭಾಗದಲ್ಲಿ ಕಲಿಸಲಾಗುವ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ತರಗತಿ ನಡೆಸಿದ ಅಧ್ಯಾಪಕನಿಗೆ ಮೂವರ ತಂಡ ಅಮಾನುಷವಾಗಿ ಥಳಿಸಿದ ಘಟನೆ ತಿರೂರಿನಲ್ಲಿ ನಡೆದಿದೆ.


ಹಲ್ಲೆಗೊಳಗಾದ ಅಧ್ಯಾಪಕನನ್ನು ಫೈಸಲ್ ರಹ್ಮಾನಿ ಎಂದು ಗುರುತಿಸಲಾಗಿದೆ. ಮದ್ರಸಾದ 10 ನೇ ತರಗತಿಯ ಪಠ್ಯ ವಿಷಯಕ್ಕೆ ಸಂಬಂಧಿಸಿದ ಮಾದಕ ವಸ್ತುಗಳ ದುಷ್ಪರಿಣಾಮ, ಹಾಗೂ ಅನೈತಿಕ ಪ್ರೇಮ ಸಲ್ಲಾಪಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದರು.


ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ಅಧ್ಯಾಪಕ, ಮಸೀದಿಗೆ ಬಂದ ಮೂವರು ಮಾಸ್ಕ್ ಧಾರಿ ಯುವಕರು ಬಹಳ ಅಗತ್ಯವಾಗಿ ಮನೆಗೆ ಬರಬೇಕು. ಅಜ್ಜಿಗೆ ಹುಷಾರಿಲ್ಲದ ಕಾರಣ ಆಧ್ಯಾತ್ಮಿಕ ಚಿಕಿತ್ಸೆ ನಡೆಸಬೇಕಿದೆ ಎಂದು ಹೇಳಿದ್ದರು. ಸತ್ಯವೆಂದು ಭಾವಿಸಿ ನಾನು ಅವರೊಂದಿಗೆ ಹೋಗಿದ್ದೆ. ಆದರೆ ಅವರ ಕಾರಿನ ಬಳಿ ತಲುಪಿದಾಗ ಏನೋ ಅಪಾಯ ಕಾದಿದೆ ಎಂಬ ಅರಿವಾಗಿ ನಾನು ಕಾರಿಗೆ ಹತ್ತಲು ನಿರಾಕರಿಸಿದೆ. ತಕ್ಷಣವೇ ನನ್ನನ್ನು ಥಳಿಸಿದ ಮೂವರು ಪರಾರಿಯಾಗಿದ್ದಾರೆ ಎಂದು ಹೇಳಿದರು.


ಘಟನೆಯ ಬಗ್ಗೆ ತಿರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version