Home Uncategorized ಮಡಿಕೇರಿ: ನೆಲ್ಯಹುದಿಕೇರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ: ಕೋರ್ಟ್ ಆದೇಶ ಪಾಲಿಸಲು ಮನವಿ

ಮಡಿಕೇರಿ: ನೆಲ್ಯಹುದಿಕೇರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ: ಕೋರ್ಟ್ ಆದೇಶ ಪಾಲಿಸಲು ಮನವಿ

►ಶಿರವಸ್ತ್ರಕ್ಕಾಗಿ ಪಟ್ಟು ಹಿಡಿದ 8,9,10 ನೆ ತರಗತಿಯ 38 ವಿದ್ಯಾರ್ಥಿಗಳು

ಮಡಿಕೇರಿ: ಶಿರವಸ್ತ್ರ ಧರಿಸಿ ಶಾಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿರುವ ಘಟನೆ ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.

ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ (ಸರಕಾರಿ ಶಾಲೆ) ವಿದ್ಯಾರ್ಥಿಗಳು ಕಳೆದ ಮೂರು ದಿನಳಿಂದ ಶಿರವಸ್ತ್ರ ಧರಿಸಿ ಬಂದ ಕಾರಣ ಮುಖ್ಯೋಪಾಧ್ಯಾಯರು ಪ್ರವೇಶಕ್ಕೆ ಅವಕಾಶ ನಿರಾಕರಿಸಿದ್ದಾರೆ.

ಶಾಲೆಯ ಕೊಠಡಿಗೆ ಪ್ರವೇಶ ನಿರಾಕರಿಸಿದರೂ 38 ಮಕ್ಕಳು ಶಾಲಾ ವಠಾರದಲ್ಲಿಯೇ ಕುಳಿತಿದ್ದರು. ಕೆಲವು ಮಕ್ಕಳು ಕೂಡಾ ಶಾಲೆಗೆ ಆಗಮಿಸಿ ಮುಖ್ಯೋಪಾಧ್ಯಾಯರೊಂದಿಗೆ ಚರ್ಚೆ ನಡೆಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಪೋಷಕರೊಂದಿಗೆ ಚರ್ಚಿಸಿ, ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕೆಂದರು. ನಂತರ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ಆದರೆ ನಮಗೆ ಶಿರವಸ್ತ್ರ ಹಾಗೂ ವಿದ್ಯಾಭ್ಯಾಸ ಎರಡೂ ಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಹೈಕೋರ್ಟ್ ಮಧ್ಯಂತರ ಆದೇಶ ಇರುವುದರಿಂದ ಶಿರವಸ್ತ್ರ ಧರಿಸಿ ಪ್ರವೇಶಕ್ಕೆ ಅವಕಾಶ ಇಲ್ಲವೆಂದು ಅಧಿಕಾರಿ ಸ್ಪಷ್ಟಪಡಿಸಿದರು.

ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್, ಸಬ್ ಇನ್ಸ್ಪೆಕ್ಟರ್ ಮೋಹನ್ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Join Whatsapp
Exit mobile version