Home ಟಾಪ್ ಸುದ್ದಿಗಳು ಲಾಂಗ್‌ ಹಿಡಿದು ರೀಲ್ಸ್‌ ಪ್ರಕರಣ: ಜೈಲಿನಿಂದ ರಜತ್-ವಿನಯ್ ರಿಲೀಸ್

ಲಾಂಗ್‌ ಹಿಡಿದು ರೀಲ್ಸ್‌ ಪ್ರಕರಣ: ಜೈಲಿನಿಂದ ರಜತ್-ವಿನಯ್ ರಿಲೀಸ್

0

ಬೆಂಗಳೂರು: ಲಾಂಗ್ ಹಿಡಿದು ರೀಲ್ಸ್‌ ಮಾಡಿದ ಆರೋಪದಡಿ ಬಂಧಿತರಾಗಿದ್ದ ಕನ್ನಡ ಬಿಗ್‌ ಬಾಸ್‌ ರಿಯಾಲಿಟಿ ಶೋನ ಮಾಜಿ ಸ್ಪರ್ಧಿಗಳಾದ ರಜತ್‌ ಕಿಶನ್‌ ಮತ್ತು ವಿನಯ್‌ ಗೌಡ ಅವರಿಗೆ ನಗರದ 24ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಇದರ ಬೆನ್ನಲ್ಲೇ ಇಂದು (ಮಾ.29) ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

24ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ (ಮಾ.28) ಮಧ್ಯಾಹ್ನವೇ ರಜತ್‌ ಹಾಗೂ ವಿನಯ್‌ ಗೌಡ ಅವರಿಗೆ ಜಾಮೀನು ನೀಡಿತ್ತು. ಆದರೆ, ನ್ಯಾಯಾಲಯದಿಂದ ಆದೇಶ ಪ್ರತಿ ತಡವಾಗಿ ಜೈಲು ಅಧಿಕಾರಿಗಳ ಕೈ ಸೇರಿದ್ದರಿಂದ ಒಂದು ದಿನ ಹೆಚ್ಚುವರಿಯಾಗಿ ಜೈಲಿನಲ್ಲಿ ಕಳೆದು, ಇಂದು ಬಿಡುಗಡೆಯಾಗಿದ್ದಾರೆ.

ರೀಲ್ಸ್​ ಮಾಡುವ ಬರದಲ್ಲಿ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಮಚ್ಚು ಹಿಡಿದುಕೊಂಡು ವಿಡಿಯೋ ಶೂಟ್​ ಮಾಡಿದ್ದರು. ಹೀಗಾಗಿ ಈ ಇಬ್ಬರ ಮೇಲೆ ​ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು. ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದರೆ, ವಿನಯ್​ ಗೌಡ ಹಾಗೂ ರಜತ್​ ಕಿಶನ್ ಫೈಬರ್​ ಮಚ್ಚು ನೀಡಿ ಯಾಮಾರಿಸಿದ್ದರು ಎನ್ನಲಾಗಿದೆ. ಹೀಗಾಗಿ ಪೊಲೀಸರು ಆ ರಿಯಲ್ ಮಚ್ಚಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version